ಹುಬ್ಬಳ್ಳಿ: ಹೆಚ್ಚಿನ ಲಾಭದಾಸೆಯ ಜಾಹೀರಾತು ನಂಬಿದ ನಗರದ ಮಹಿಳೆಯೊಬ್ಬರು 3.16 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿ ವಂಚನೆಗೊಳಗಾದ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬಿಇಸಿ ಎಂಬ ಇ-ಕಾಮರ್ಸ್ ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲಿ ಶರ್ಟ್ ಹಾಗೂ ಶೂಗಳ ಮೇಲೆ 6 ಸಾವಿರ ರೂ. 50 ದಿನಗಳವರೆಗೆ ಹೂಡಿಕೆ ಮಾಡಿದರೆ 3,800 ರೂ. ಲಾಭ ಬರುವ ಜಾಹೀರಾತು ವೀಕ್ಷಿಸಿದ್ದಾರೆ. ಬಳಿಕ ಹಣ ಹೂಡಿಕೆ ಮಾಡಿದ್ದು, ಪ್ರಾರಂಭದಲ್ಲಿ ಲಾಭ ನೀಡಿದ್ದಾರೆ. ಇದನ್ನು ನಂಬಿದ ಮಹಿಳೆ, ಹಂತ ಹಂತವಾಗಿ ಹೆಚ್ಚು ಹಣ ಹೂಡಿಕೆ ಮಾಡಿದಾಗ ಅಪರಿಚಿತ ವ್ಯಕ್ತಿ ಮರಳಿ ಹಣ ನೀಡದೆ ವಂಚಿಸಿದ್ದಾನೆ.