ಹುಬ್ಬಳ್ಳಿ: ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತನೊಬ್ಬ, ಮುಂಬೈ ಮೂಲದ ಇಲ್ಲಿನ ಅಮರಗೋಳದ ವೆಂಕಟೇಶ ಎಸ್. ಎಂಬಾತನ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ 3.13 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವೆಂಕಟೇಶ ಅವರ ಮೊಬೈಲ್ ಫೋನ್ನಿಂದ ಎನಿಡೆಸ್ಕ್ ಆಪ್ ಡೌನ್ಲೋಡ್ ಮಾಡಿಸಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.