ಜಿಲ್ಲೆ

2ರಂದು ವಿಜಯ ಸಂಕಲ್ಪ ಸಮಾವೇಶ

Chamarajanagar

ಗುಂಡ್ಲುಪೇಟೆ: ಪಟ್ಟಣದಲ್ಲಿ ಮಾ.2ರಂದು ವಿಜಯ ಸಂಕಲ್ಪ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್ ತಿಳಿಸಿದರು.


ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಬಿಜೆಪಿ ಸಿದ್ಧತೆ ನಡೆಸಿದೆ. ಪೇಜ್ ಅಭಿಯಾನ ಹಾಗೂ ವಿಜಯ ಸಂಕಲ್ಪ ಅಭಿಯಾನದಲ್ಲಿ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಮತದಾರರಿಗೆ ತಿಳಿಸಿ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಎಂಬ ಬರಹಗಳ ಪೋಸ್ಟರ್ ಗೋಡೆಗಳಿಗೆ ಹಚ್ಚಿದ್ದಾರೆ. ಮೂರನೇ ಹಂತದಲ್ಲಿ ಮಾ.2ರಂದು ಮಲೆಮಹದೇಶ್ವರ ಬೆಟ್ಟದಿಂದ ಆಗಮಿಸುವ ವಿಜಯಸಂಕಲ್ಪ ಯಾತ್ರೆಯ ರಥವನ್ನು ಪಟ್ಟಣದ ನೆಹರೂ ಪಾರ್ಕ್ ಬಳಿ ಸ್ವಾಗತಿಸಲಾಗುವುದು. ನಂತರ ಸಮಾವೇಶ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಿರೀಕಾಟಿ ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ರವಿ, ಚಾಮುಲ್ ಮಾಜಿ ನಿರ್ದೇಶಕ ಮಾದಪ್ಪ, ಪುರಸಭೆ ಸದಸ್ಯ ಕಿರಣ್‌ಗೌಡ. ಮಾಧ್ಯಮ ಸಂಚಾಲಕ ಎಸ್.ಸಿ.ಮಂಜುನಾಥ್, ಹಂಗಳ ಬಸವೇಶ್ ಇದ್ದರು.