ಚಿತ್ರದುರ್ಗ:ಸೆಪ್ಟೆಂಬರ್ 6ರಂದು ಶ್ರೀ ಕೃಷ್ಣ ಜಯಂತಿ ಹಾಗೂ 17ರಂದು ವಿಶ್ವಕರ್ಮ ಜಯಂತಿ ಆಚರಣೆ ಸಲುವಾಗಿ ಡಿಸಿ ಕಚೇರಿಯ ಲ್ಲಿ 2ರ ಂದು ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಶ್ರೀ ಕೃಷ್ಣ ಜಯಂತಿ ಹಾಗೂ 11.30ಕ್ಕೆ ವಿಶ್ವಕರ್ಮ ಜಯಂತಿ ಪೂ ರ್ವಭಾವಿ ಸಭೆ ನಡೆಯಲಿದೆ. ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧ್ಯಕ್ಷತೆ ವಹಿಸುವರು. ಸಮಾಜದ ಮುಖಂಡರು,ಜಿಲ್ಲಾ ಮಟ್ಟದ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.