ಜಿಲ್ಲೆ

2ರಂದು ಕೊಳಾರ್ ನಲ್ಲಿ ಗುಡ್ ಫ್ರೈಡೇ

ಬೀದರ್: ಕಲಬುರಗಿ ಹೆದ್ದಾಯ ಕೊಳಾರ್(ಕೆ) ಮುಖ್ಯ ರಸ್ತೆ ಮೇಲಿರುವ ಜೇಮ್ಸ್ ಅವರ ಹೊಲದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಏ.2ರಂದು ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಈ ನಿಮಿತ್ತ ವಿಶೇಷ ಪ್ರಾರ್ಥನೆ, ಭಜನೆ, ಅನ್ನದಾಸೋಹ ಇತರೆ ಕಾರ್ಯಕ್ರಮ ನಡೆಯಲಿವೆ.

ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಅವರು ಸಾನ್ನಿಧ್ಯ ವಹಿಸಿ, ಭಕ್ತರಿಗೆ ದರ್ಶನ ನೀಡಲಿದ್ದಾರೆ. ವಿವಿಧ ಸಮಾಜ ಗಣ್ಯರು, ಮುಖಂಡರು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10ರಿಂದ ರಾತ್ರಿವರೆಗೆ ನಾನಾ ಕಾರ್ಯಕ್ರಮಗಳು ಜರುಗಲಿವೆ.