ಜಿಲ್ಲೆ

2ಎ ಮೀಸಲಾತಿಗಾಗಿ ಪಾದಯಾತ್ರೆ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪಾದಯಾತ್ರೆ ನಡೆಸಲಾಗುವುದು ಎಂದು ವಿಜಯಪುರದಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಡಿಸೆಂಬರ್ 23 ರಿಂದ ಪಾದಯಾತ್ರೆಗೆ ನಿರ್ಧಾರಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಲಕ್ಷ ಹೆಜ್ಜೆಗಳೊಂದಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ. ಕಳೆದ ಅಕ್ಟೋಬರ್ 28ರಂದು ಬೆಳಗಾವಿ ಸುವರ್ಣ ಸೌಧದ ಎದುರು ಶ್ರೀಗಳು ಉಪವಾಸ ಸತ್ಯಾಗ್ರಹ ನಡೆಸಿದ್ದ ವೇಳೆ ಬೇಡಿಕೆ ಇಡೇರಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಈ ವರೆಗೂ ಬೇಡಿಕೆ ಇಡೇರದ ಕಾರಣ ಪಾದಯಾತ್ರೆಗೆ ಮುಂದಾಗಿದ್ದೇವೆ ಎಂದು ಪಂಚಮಸಾಲಿ ಶ್ರೀಗಳು ಹೇಳಿದ್ರು. ಸ್ವತಃ ಸಿಎಂ ಅವರು ಪೋನ್ ಕರೆ ಮಾಡಿ ಭರವಸೆ ನೀಡಿದ್ದರು, ಆದ್ದರಿಂದ ಸತ್ಯಾಗ್ರಹ ಹಿಂಪಡೆಯಲಾಗಿತ್ತು ಎಂದು ಪಂಚಮಸಾಲಿ ಶ್ರೀಗಳು ತಿಳಿಸಿದ್ರು. ಇನ್ನು ಸಿಎಂ ಬದಲಾವಣೆ ವಿಚಾರ ನಮಗೆ ಗೊತ್ತಿಲ್ಲ. ಬದಲಾವಣೆ ಮಾಡೋದು ಬಿಡೋದು ಪಕ್ಷದ ನಾಯಕರಿಗೆ, ಹೈಕಮಾಂಡ್ ಗೆ ಬಿಟ್ಟ ವಿಚಾರ. ಒಂದು ವೇಳೆ ಬದಲಾವಣೆ ಮಾಡೋದೆ ಆದ್ರೆ ಉತ್ತರ ಕರ್ನಾಟಕದವರನ್ನು ಗಾಗೂ ಪಂಚಮಸಾಲಿ ಸಮುದಾಯವರನ್ನು ಸಿಎಂ ಮಾಡಿ ಎಂದು ಶ್ರೀಗಳು ಒತ್ತಾಯಿಸಿದ್ರು. ಇನ್ನು ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಸವಣ್ಣನವರ ಹೆಸರು ಇಡಬೇಕು. ಬಸವಣ್ಣನವರ ಹೆಸರು ಇಟ್ಟರೇ ಬಹಳ ಸೂಕ್ತವಾಗಿರುತ್ತೆ. ದಲಿತ ಅಭಿವೃದ್ಧಿ ನಿಗಮನಕ್ಕೆ ಅಂಬೇಡ್ಕರ್ ಹೆಸರು ಇಡಲಾಗಿದೆ, ಹಿಂದೂಳಿದ ವರ್ಗಗಳ ಅಭಿವೃದ್ಧಿ ದೇವರಾಜ ಅರಸು ಹೆಸರಿಡಲಾಗಿದೆ. ಹಾಗೇ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಬಸವಣ್ಣನವರ ಹೆಸರು ಇಡಬೇಕು ಅಂತ ಸರ್ಕಾರದ ಎದುರು ಪ್ರಸ್ತಾಪವನ್ನು ಇಟ್ಟಿರುವೆ ಎಂದು ಪಂಚಮಸಾಲಿ ಶ್ರೀಗಳು ತಿಳಿಸಿದ್ರು.