ಜಿಲ್ಲೆ

29ರಂದು ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಚಿತ್ರದುರ್ಗ: ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜ,ನಗರದ ತರಾರು ರಂಗಮಂದಿರದಲ್ಲಿ ಮೇ 29ರಂದು ಬೆಳಗ್ಗೆ 10.30 ಕ್ಕೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಿದೆ ಎಂದು ಸಮಾಜದ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಡಿ.ಟಿ.ಶಿವಾನಂದಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9ಕ್ಕೆ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ರಂಗಮಂದಿರದವರೆಗೆ ಮಲ್ಲಮ್ಮ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸಭಾ ಕಾರ‌್ಯಕ್ರಮವನ್ನು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಉದ್ಘಾಟಿಸುವರು.

ಮುಖ್ಯಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಟಿ.ನಾಗಿರೆಡ್ಡಿ,ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ,ಭದ್ರಾಮೇಲ್ದಂಡೆ ಯೋಜನೆ ಕಾರ‌್ಯಪಾಲಕ ಇಂಜಿನಿಯರ್ ಆರ್.ಚಂದ್ರಮೌಳಿ ಆಗಮಿಸಲಿದ್ದಾರೆ. ಡಾ.ಟಿ.ಎನ್.ನಿರಂಜನಪ್ರಭು ಉಪನ್ಯಾಸ ನೀಡಲಿದ್ದಾರೆ.

ಈ ಬಾರಿ ಯ ಎಸ್ಸೆಸ್ಸೆಲ್ಸಿ,ಸೆಕೆಂಡ್‌ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಸಮಾಜ ಬಾಂಧವರು,ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಿವಾನಂದಪ್ಪ ಮನವಿ ಮಾಡಿದರು.

ಸಮಾಜದ ಜಿಲ್ಲಾಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ,ಪ್ರತಿ ವರ್ಷ ಮೇ 10ರಂದು ಆಚರಿಸಬೇಕಿದ್ದ ಮಲ್ಲಮ್ಮ ಜಯಂತಿಯನ್ನು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ 29ರಂದು ಆಚರಿಸಲಾಗುತ್ತಿದೆ ಎಂದರು. ನಾಗರಾಜ್‌ಸಂಗಂ,ಡಾ.ಪಾಲಾಕ್ಷಪ್ಪ,ಶಶಿಧರ್, ಶ್ರೀನಿವಾಸ್,ಬಸವರಾಜ್,ವಕೀಲ ರಘು ಸಮಾಜದ ಇತರ ಪ್ರಮುಖರು ಇದ್ದರು.