ಜಿಲ್ಲೆ

ಲೋಕ ಅದಾಲತ್​ನಲ್ಲಿ 2910 ಪ್ರಕರಣ ಇತ್ಯರ್ಥ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ತಾಲೂಕು ಕಾನೂನು ಸೇವೆಗಳ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ 1.96 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಿರಿಯ ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ಒಟ್ಟು 2910 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿವೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಅಮೊಲ್ ಜೆ. ಹಿರಿಕುಡೆ ಪ್ರಕಟಣೆ ನೀಡಿದ್ದಾರೆ.

ಸಿವಿಲ್ ಮತ್ತು ಕ್ರಿಮಿನಲ್ ಎರಡೂ ವಿಭಾಗ ಸೇರಿ ಬಾಕಿಯಿದ್ದ ಬ್ಯಾಂಕ ವಸೂಲಾತಿ ಪ್ರಕರಣ, ಚೆಕ್ ಬೌನ್ಸ್, ವಾಹನ ಅಪಘಾತ, ಸಿವಿಲ್ ವ್ಯಾಜ್ಯಗಳು, ಅಮಲ್ದಾರಿ, ಜೀವನಾಂಶ, ಕೌಟುಂಬಿಕ ಕಲಹ, ಗೃಹ ಕೃತ್ಯ, ದೌರ್ಜನ್ಯ, ಲಘು ಅಪರಾಧ, ವ್ಯಾಜ್ಯ ಪೂರ್ವಸಾಲ ವಸೂಲಾತಿ, ಪ್ರಕರಣ ಸೇರಿ ರಾಜೀ ಸಂಧಾನದ ಒಟ್ಟು 1.96.89.842 ಮೊತ್ತದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

2910 ಪ್ರಕರಣ ಇತ್ಯರ್ಥ: ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ 252 ಹಾಗೂ ವ್ಯಾಜ್ಯಪೂರ್ವ 1211 ಸೇರಿ ಒಟ್ಟು 1463, ಕಿರಿಯ ದಿವಾಣಿ ನ್ಯಾಯಾಲಯದಲ್ಲಿನ 235 ಹಾಗೂ ವ್ಯಾಜ್ಯಪೂರ್ವ 1212 ಸೇರಿ ಒಟ್ಟು 1447 ಪ್ರಕರಣಗಳು ಇತ್ಯರ್ಥಗೊಂಡಿವೆ.

ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ ಹಾಗೂ ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಸೇರಿ ಹಿರಿಯ ಕಿರಿಯ ವಕೀಲರು ಹಾಗೂ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ಪಕ್ಷಗಾರರು ಇದ್ದರು.

ಬ್ಯಾಡಗಿ, ತಾಲೂಕು ಕಾನೂನು ಸೇವೆಗಳ ಸಮಿತಿ, ಲೋಕ ಅದಾಲತ್​, 2910 ಪ್ರಕರಣ ಇತ್ಯರ್ಥ,