ಚಿತ್ರದುರ್ಗ: ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಪತ್ರಿಕಾಭವನದಲ್ಲಿ ನ.29ರ ಬೆಳಗ್ಗೆ 10.30ಕ್ಕೆ ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ‌್ಯಕ್ರಮ ಏರ್ಪಡಿಸಲಾಗಿದೆ ಎಂದು ಕಲಾ ಚೈತನ್ಯ ಸೇವಾ ಸಂಸ್ಥೆ ಕಾರ‌್ಯದರ್ಶಿ ನಾಗರಾಜ್‌ಬೇದ್ರೆ ತಿಳಿಸಿದ್ದಾರೆ.
ಎಂಎಲ್‌ಸಿ ಕೆ.ಎಸ್. ನವೀನ್ ಉದ್ಘಾಟಿಸಲಿದ್ದಾರೆ. ಡಿಸಿ ಟಿ. ವೆಂಕಟೇಶ್, ವೈದ್ಯ ಡಾ.ಬಿ. ಮಲ್ಲಿಕಾರ್ಜನ್‌ಕೀರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ. ಮಲ್ಲಿಕಾರ್ಜನ್, ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ. ವೀರೇಶ್, ಚಿತ್ರಕಲಾವಿದ ಎಸ್.ಸತೀಶ್‌ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ರಾಜ್ಯಲಲಿತಾ ಕಲಾ ಆಕಾಡೆಮಿ ಸದಸ್ಯ ಸಿ. ಕಣ್ಮೇಶ್ ಭಾಗವಹಿಸಲಿದ್ದಾರೆ.
ನಾಗರಾಜ್ ಬೇದ್ರೆ, ನವೀನ್ ಬೇದ್ರೆ, ಅಮೂಲ್ಯ, ಜವಳಿಶಾಂತಕುಮಾರ್, ಮಾರುತಿ, ಪ್ರಜ್ಞಾಮಂಜುನಾಥ್ ಹಾಗೂ ಹಿರಿಯೂರಿನ ಸುಷ್ಮಾ ಅವರ ಚಿತ್ರಕಲೆಗಳು ಪ್ರದರ್ಶನಗೊಳ್ಳಲಿವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಸಲಾಗುವುದು. ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಜಿ.ಎಸ್. ಅನಿತ್‌ಕುಮಾರ್, ಇಕ್ಬಾಲ್‌ಹುಸೇನ್, ಉತ್ತಮಚಂದ್ ಸುರಾನ ಹಾಗೂ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಭಾಗವಹಿಸಲಿದ್ದಾರೆ ಎಂದು ನಾಗರಾಜ್ ತಿಳಿಸಿದ್ದಾರೆ.