ಜಿಲ್ಲೆ

28ರಂದು ಸ್ವರ್ಣ ಜಯಂತಿ ವಿಶೇಷ ಸಭೆ

ಸೇಡಂ: ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ ಕಾರ್ಯಕ್ರಮದ ಪೂರ್ವಭಾವಿಯಾಗಿ ಸೆ.28 ಹಾಗೂ 29ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಸಿದ್ದಪ್ಪ ತಳ್ಳಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸೆ.28ರಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿಯಿಂದ ವಿಶೇಷ ಸಭೆ ಆಯೋಜಿಸಲಾಗಿದೆ. ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಸೆ.29ರಂದು 2025ರ ಜ.29 ರಿಂದ ಫೆ.6ರವರೆಗೆ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ನಡೆಯಲಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ವಿವಿಧ ಲೇಖಕರು ರಚಿಸಿರುವ ನಾಲ್ಕು ಪುಸ್ತಕಗಳನ್ನು ಜನಾರ್ಪಣೆ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ರಾಷ್ಟಿçÃಯ ಚಿಂತಕ ಕೆ.ಎನ್.ಗೋವಿಂದಾಚಾರ್ಯ, ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮೊದಲ ಶಿಕ್ಷಕ ಶಿವರಾಮರೆಡ್ಡಿ ಚೆಟ್ಟಕಿಂದಿ, ಮೊದಲ ವಿದ್ಯಾರ್ಥಿ ದತ್ತಾತ್ರೇಯ ಐನಾಪುರ ಸೇರಿ ಇತರರು ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ.
ಜಗದೀಶ ಕಡಬಗಾಂವ್ ಸಂಪಾದಕತ್ವದ ಕೊತ್ತಲ ಸ್ವರ್ಣ ವಿಶೇಷ ಸಂಚಿಕೆ, ಡಾ. ಚಂದ್ರಕಲಾ ಬಿದರಿ ರಚಿಸಿದ ಹರಿಸಿದ ಗಣ್ಯರು, ರಾಮಚಂದ್ರ ಜೋಶಿ ರಚಿಸಿದ ಭಾರತ ವಿಕಾಸ ಸಂಗಮ ಹಾಗೂ ಶಿಕ್ಷಕಿ ಶಾರದಾ ಅವರ ಬದುಕು ಭಾವ ಕವನ ಸಂಕಲನ ಕೃತಿಗಳು ಬಿಡುಗಡೆ ಆಗಲಿವೆ ಎಂದು ತಿಳಿಸಿದ್ದಾರೆ.