ಜಿಲ್ಲೆ

28ರಂದು ಶೂನ್ಯ ನೆರಳಿನ ದಿನ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಭೂಮಿ ಸಮಭಾಜಕ ವೃತ್ತ ರೇಖೆ ಉತ್ತರ ಮತ್ತು ದಕ್ಷಿಣದ ಪ್ರದೇಶಗಳಲ್ಲಿ ಸೂರ‌್ಯ ವರ್ಷದಲ್ಲಿ 2 ಬಾರಿ ನಿರ್ದಿಷ್ಟವಾಗಿ ನೆತ್ತಿ ಮೇಲೆ ಬರುವುದೇ ಶೂ ನ್ಯ ನೆರಳಿನ ದಿನವಾಗಿದ್ದು,ಏ.28ರಂದು ಮಧ್ಯಾಹ್ನ 12.22ಕ್ಕೆ ಶೂನ್ಯ ನೆರಳನ್ನು ನೋಡಲು ಸಾಧ್ಯವಾಗಲಿದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇ ಶನ್ ಕಾರ‌್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದ್ದಾರೆ.
ಸಾಮಾನ್ಯ ಅನಿಸಿಕೆಯಂತೆ ಸೂರ್ಯ ಪ್ರತಿ ದಿನ ಮಧ್ಯಾಹ್ನ ನೆತ್ತಿ ಮೇಲೆ ಇರುವುದಿಲ್ಲ. ಯಾವುದೇ ಮಧ್ಯಾಹ್ನದ ನೆರಳನ್ನು ನೋಡುವುದರಿಂದ ಇದು ತಿಳಿಯುತ್ತದೆ. ಸೂರ್ಯ ಗರಿಷ್ಠ ಎತ್ತರ ತಲುಪಿದಾಗ,ಅದರ ನೆತ್ತಿಯ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಇದಕ್ಕೆ ಭೂಮಿ ಅಕ್ಷ 23.5 ಡಿ ಗ್ರಿ ಒರೆಯಾಗಿರುವುದು ಕಾರಣವಾಗಿದೆ.
ಭೂಮಿಯ ಬೇರೆ,ಬೇರೆ ಸ್ಥಳಗಳಲ್ಲಿ ಬೇರೆ,ಬೇರೆ ದಿನಾಂಕಗಳಲ್ಲಿ ಶೂನ್ಯ ನೆರಳು ಸಾಧ್ಯವಿದ್ದು,ಚಿತ್ರದುರ್ಗದಲ್ಲಿ ಭಾನುವಾರ ಕೆಲ ನಿಮಿಷಗಳ ಕಾಲ ನೆರಳು ಕಾಣಿಸುವುದಿಲ್ಲ. ಸಮತಟ್ಟಾದ ನೆಲದ ಮೇಲೆ ಉದ್ದನೆ ಕಂಬದ ಸಹಾಯದಿಂದ ಶೂನ್ಯನೆರಳನ್ನು ಗುರುತಿಸ ಬಹುದಾಗಿದೆ ಎಂದು ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.