ಜಿಲ್ಲೆ

28ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ:ನಗರಸಭೆಯಿಂದ ಎಲ್‌ಟಿ ಮಾರ್ಗಗಳ ಸ್ಥಳಾಂತರ ಕಾಮಗಾರಿ ಹಿನ್ನೆಲೆಯಲ್ಲಿ ನ.28ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಗರದ ಎಂ.ಕೆ ಪ್ಯಾಲೇಸ್ ಹತ್ತಿರ,ರೈಲ್ವೇ ಸ್ಟೇಷನ್,ಚೋಳಗುಡ್ಡ,ನೆಹರು ನಗರ, ಅಗಸನಕಲ್ಲು,ತಾಜ್‌ಪೀರ್ ಲೇಔಟ್,ಆಶ್ರಯ ಬಡಾವಣೆ,ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ,ದವಳಗಿರಿ ಬಡಾ ವಣೆ 3ನೇ ಹಂತ, ವಿದ್ಯಾಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.