ಅಥಣಿ ಗ್ರಾಮೀಣ, ಬೆಳಗಾವಿ: ಕಾಗವಾಡ ಮತಕ್ಷೇತ್ರದ ಮದಬಾವಿ ಗ್ರಾಮಕ್ಕೆ ಸೆ. 28ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಆಗಮಿಸಲಿದ್ದಾರೆ ಎಂದು ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಹೇಳಿದರು.
ತಾಲೂಕಿನ ಅನಂತಪುರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ರಾಷ್ಟ್ರಹಿತ ಆಧಾರದಲ್ಲಿ ಕೆಲಸ ಮಾಡುವ ಬಿಜೆಪಿಗೆ ಕಾರ್ಯಕರ್ತರೇ ನಿಜವಾದ ಆಸ್ತಿ. ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನಡೆಸಿ ಅಭಿವೃದ್ಧಿ ಕಾರ್ಯ ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷದ ಅಧಿಕಾರವಿದೆ. ನರೇಂದ್ರ ಮೋದಿ ಹಲವು ಜನಪರ ಕಾರ್ಯ ಮಾಡಿದ್ದಾರೆ. ಕಾರ್ಯಕರ್ತರು ಎದೆಗುಂದದೆ ಪಕ್ಷದ ಸಂಘಟನೆ ಬಲಪಡಿಸಬೇಕು. ಕ್ಷೇತ್ರದ ಜನರ ಹಿತಕ್ಕಾಗಿ ಬಿಜೆಪಿ ಸದಾ ಸಿದ್ಧ ಎಂದರು.
ಬಿಜೆಪಿ ಮುಖಂಡ ಓಂಪ್ರಕಾಶ ಡೊಳ್ಳಿ ಮಾತನಾಡಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ, ಮುಖಂಡ ತಮ್ಮಣ್ಣ ಪಾರಶೆಟ್ಟಿ, ಮಹಾದೇವ ಕೋರೆ ಮಾತನಾಡಿದರು. ಆರ್.ಎಂ ಪಾಟೀಲ, ಶಿವಾನಂದ ಗೋಲಬಾಂವಿ, ಶಿವಶಂಕರ ಸಂಕ್ರಟ್ಟಿ, ರವಿ ನಾಗಗೋಳ, ಸುನೀಲ ಪಾಟೀಲ, ಸಿದ್ಧರಾಮ ಮೇತ್ರಿ, ಶಿವಾನಂದ ಪಾಟೀಲ, ರಾಜು ಮದಭಾವಿ, ಶಂಕರ ದೊಡ್ಡಣ್ಣವರ, ವಿಶ್ವಾಸ ಪವಾರ, ಮೃತ್ಯುಂಜಯ ಹಿರೇಮಠ, ಸುರೇಶ ಹಲ್ಯಾಳೆ, ರಾಜು ಮಾನೆ, ರೇವಣಸಿದ್ಧ ನಕಾತೆ, ಬಾವುಸಾಹೇಬ ಪತ್ತಾರ, ಬಾಪ್ಪ ಡಾಂಗೆ ಸೇರಿ ಇತರರಿದ್ದರು.