ಮಂಜುನಾಥ ಅಂಗಡಿ ಧಾರವಾಡ
ಜಿಲ್ಲೆಯಲ್ಲಿ 2019ರಿಂದ 2022ರವರೆಗೆ ಅತಿವೃಷ್ಟಿ ಕಾಡಿತ್ತು. ವಿಪರೀತ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಪರಿಹಾರ ೋಷಿಸಿತ್ತು. 2022ರಲ್ಲಿ ಜಿಲ್ಲಾದ್ಯಂತ 2,943 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ೋಷಣೆಯಾದರೂ ಲಾನುಭವಿಗಳು ಮನೆ ಕಟ್ಟಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ.
ಪೂರ್ಣ ಹಾನಿಯಾದ ಮನೆಗಳಿಗೆ ಸರ್ಕಾರ 5 ಲಕ್ಷ ರೂ. ೋಷಿಸಿದ್ದು, 2022ರಲ್ಲಿ ಪೂರ್ಣ ಹಾನಿಯಾದ ಮನೆಗಳಿಲ್ಲ. ಇನ್ನು ಶೇ. 50ರಿಂದ 75 ಪ್ರಮಾಣ ಭಾಗಶಃ ಹಾನಿಯಾದ ಮನೆಗಳಿಗೆ 3 ಲಕ್ಷ ರೂ. ೋಷಿಸಲಾಗಿದೆ. ಹಾನಿಯಾದ ಮನೆಯನ್ನು ನೆಲಸಮ ಮಾಡಿ ಮರುನಿರ್ಮಾಣ ಮಾಡಿಕೊಳ್ಳುವ ಒಪ್ಪಿಗೆಪತ್ರ ಬರೆದುಕೊಟ್ಟ ಲಾನುಭವಿಗಳನ್ನು ಬಿ2 ಕೆಟಗರಿಗೆ ಸೇರಿಸಿ 5 ಲಕ್ಷ ರೂ. ೋಷಿಸಲಾಗಿದೆ. ಭಾಗಶಃ ಹಾನಿಯಾದ ಮನೆಯನ್ನು ಕೇವಲ ದುರಸ್ತಿ ಮಾಡಿಕೊಂಡರೆ ಅಂಥವರನ್ನು ಬಿ1 ಕೆಟಗರಿಗೆ ಸೇರಿಸಿ 3 ಲಕ್ಷ ರೂ. ೋಷಿಸಲಾಗಿದೆ. ಉಳಿದಂತೆ ಅಲ್ಪಸ್ವಲ್ಪ ಹಾನಿಯಾದರೆ ಸಿ ಕೆಟಗರಿಗೆ ಸೇರಿಸಿ 50,000 ರೂ. ಪರಿಹಾರಕ್ಕೆ ಅರ್ಹ ಮಾಡಲಾಗಿದೆ.
ಜಿಲ್ಲೆಯಲ್ಲಿ ಬಿ2 ಕೆಟಗರಿಯ 797 ಮನೆಗಳನ್ನು 5 ಲಕ್ಷ ರೂ. ಪರಿಹಾರಕ್ಕೆ ಅರ್ಹಗೊಳಿಸಲಾಗಿದೆ. ಈ ಪೈಕಿ ಕೇವಲ 76 ಮನೆಗಳು ಪೂರ್ಣಗೊಂಡಿದ್ದು, 147 ಮನೆಗಳು ಇನ್ನೂ ಆರಂಭಗೊಂಡಿಲ್ಲ. 797ರಲ್ಲಿ ಕಲಘಟಗಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 256 ಮನೆಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ 52 ಜನ ಇನ್ನೂ ಮನೆ ನಿರ್ಮಾಣ ಕಾರ್ಯ ಆರಂಭಿಸಿಲ್ಲ.
ಹಾನಿಯಲ್ಲಿ ಧಾರವಾಡ ತಾಲೂಕು ದ್ವಿತೀಯ ಸ್ಥಾನದಲ್ಲಿದ್ದು, 246 ಮನೆಗಳಿಗೆ ಹಾನಿಯುಂಟಾಗಿದೆ. ತಾಲೂಕಿನಲ್ಲಿ ಇನ್ನೂ 25 ಮನೆಗಳ ನಿರ್ಮಾಣ ಆರಂಭಗೊಂಡಿಲ್ಲ. 3 ಲಕ್ಷ ರೂ. ಪರಿಹಾರದ ಬಿ1 ಕೆಟಗರಿಯಲ್ಲಿ 499 ಮನೆಗಳನ್ನು ಗುರುತಿಸಲಾಗಿದೆ. ಈ ಲಾನುಭವಿಗಳಿಗೆ 1 ಲಕ್ಷ ರೂ.ದಂತೆ 3 ಕಂತುಗಳಲ್ಲಿ ಹಣ ಪಾವತಿಯಾಗುತ್ತಿದ್ದು, ಈವರೆಗೆ 226 ಮನೆಗಳು ಪೂರ್ಣಗೊಂಡಿವೆ. ಇನ್ನೂ 138 ಮನೆಗಳ ಕೆಲಸ ಪ್ರಾರಂಭಗೊಂಡಿಲ್ಲ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 1,647 ಮನೆಗಳಿಗೆ ಹಾನಿಯಾಗಿದೆ. ಧಾರವಾಡ, ಹುಬ್ಬಳ್ಳಿ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ 289 ಸೇರಿ 1,936 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಇಂಥ ಲಾನುಭವಿಗಳು 50,000 ರೂ. ಪಡೆದು ಮನೆಗಳನ್ನು ದುರಸ್ತಿ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದುರಸ್ತಿಯಾದ ನಂತರ ಆಯಾ ಗ್ರಾಮ ಪಂಚಾಯಿತಿಗಳ ಆಪರೇಟರ್‌ಗಳು ೆಟೋ ತೆಗೆದು ಆರ್‌ಜಿಆರ್‌ಎಚ್‌ಸಿಎಲ್‌ನಲ್ಲಿ ದಾಖಲು ಮಾಡಿದರೆ ಲಾನುಭವಿಯ ಖಾತೆಗೆ ಹಣ ಸಂದಾಯವಾಗುತ್ತದೆ.
ಮನೆ ಹಾನಿ ಪರಿಹಾರವನ್ನು 2-3 ಇಲಾಖೆಗಳ ಸಹಯೋಗದಲ್ಲಿ ನಿಗದಿಪಡಿಸಲಾಗಿದೆ. ಇಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಹಣದಾಸೆಗೆ ಬಿದ್ದ ಅಧಿಕಾರಿ- ಸಿಬ್ಬಂದಿ 1 ಲಕ್ಷ ರೂ.ವರೆಗೆ ಲಂಚ ಪಡೆದು ಬಿ2, ಬಿ1 ಕೆಟಗರಿಗೆ ಅರ್ಹಗೊಳಿಸಿರುವ ದೂರುಗಳಿದ್ದವು. ಈ ವಿಷಯವಾಗಿ ಧಾರವಾಡ ಗ್ರಾಮಾಂತರದಲ್ಲಿ ಮೇಲಿಂದ ಮೇಲೆ ಪ್ರತಿಭಟನೆಗಳು ನಡೆದಿದ್ದವು.
ಅರ್ಹ ಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಟ್ಟು ಅನರ್ಹರಿಗೆ ಪರಿಹಾರ ೋಷಿಸಲಾಗಿದೆ ಎಂಬ ಕೂಗು ಪ್ರಸ್ತುತ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. 2022ರ ಮನೆಹಾನಿ ಲಾನುಭವಿಗಳು ಹಾಗೂ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮರುಪರಿಶೀಲಿಸುವಂತೆಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಮನೆ ಮರುನಿರ್ಮಾಣ ಮತ್ತು ದುರಸ್ತಿ ಕೈಗೊಳ್ಳದ ಪ್ರಕರಣಗಳನ್ನು ಪರಿಶೀಲಿಸುವಂತೆ ಸಾರ್ವಜನಿಕರಿಂದಲೂ ಒತ್ತಾಯ ಕೇಳಿಬಂದಿದೆ.
ಹಾನಿಯಾದ ಮನೆಗಳನ್ನು ದುರಸ್ತಿ ಅಥವಾ ಮರುನಿರ್ಮಾಣ ಮಾಡಿಕೊಳ್ಳದವರು ಕೂಡಲೇ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ನಿಗಮದ ಆದೇಶದಂತೆ ಬ್ಲಾಕ್ ಮಾಡಲಾಗುವುದು. ಶಾಸಕರ ಕೋರಿಕೆಯಂತೆ ಸರ್ಕಾರ ಆದೇಶಿಸಿದರೆ ಮರು ಪರಿಶೀಲನೆ ಮಾಡಲಾಗುವುದು.ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ