ಮೈಸೂರು: ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ವತಿಯಿಂದ ನಗರದ ಕೇಂದ್ರ ಗ್ರಂಥಾಲಯದಲ್ಲಿ 280 ಜನರಿಗೆ ಆರೋಗ್ಯ ತಪಾಸಣೆ ನಡೆಯಿತು. ನಗರದ ಕೇಂದ್ರ ಗ್ರಂಥಾಲಯದ ಸಿಬ್ಬಂದಿ, ಅವರ ಕುಟುಂಬ ಹಾಗೂ ಸಾರ್ವಜನಿಕರು ಶಿಬಿರದ ಲಾಭ ಪಡೆದರು.
ನ್ಯೂರೋಜೋನ್‌ನ ಆಡಳಿತಾಧಿಕಾರಿ ಧನ್ಯಾ ಸುಶ್ರುತ ಮಾತನಾಡಿ, ಥಾರ್ ಯೋಜನೆಯಡಿಯಲ್ಲಿ ಇದುವರೆಗೆ ಮೈಸೂರು ಮತ್ತು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಸೇರಿದಂತೆ 14 ಶಿಬಿರಗಳನ್ನು ನಡೆಸಿದ್ದು,
3780 ಜನರಿಗೆ ಉಚಿತ ಚಿಕಿತ್ಸೆ, ಸಲಹೆ ನೀಡಲಾಗಿದೆ. ಉಚಿತ ಸಮಾಲೋಚನಾ ತಂಡದಲ್ಲಿ ನುರಿತ ವೈದ್ಯರು, ಶಸ್ತ್ರ ಚಿಕಿತ್ಸಕರು, ಹೃದ್ರೋಗ ತಜ್ಞರು, ಸ್ತ್ರೀರೋಗ ತಜ್ಞರು, ಮೂತ್ರಪಿಂಡ ತಜ್ಞರು, ನೇತ್ರ ತಜ್ಞರು, ಮನೋವೈದ್ಯರು, ನರರೋಗ ತಜ್ಞರು, ಮಕ್ಕಳ ತಜ್ಞರು ಇರುತ್ತಾರೆ. ಎಲ್ಲ ಕಾಯಿಲೆಗಳಿಗೆ ಫೋನ್‌ನ ಮೂಲಕ ಉಚಿತ ಸಲಹೆ ಸಹ ನೀಡುವುದಾಗಿ ತಿಳಿಸಿದರು. ನಗರ ಗ್ರಂಥಾಲಯ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.