RAICHUR  
ಜಿಲ್ಲೆ

ಶ್ರೀಶೈಲಕ್ಕೆ ೨೮೦ ಬಸ್ ಸೌಲಭ್ಯ- ಉಳಿದ ಸ್ಥಳಕ್ಕೆ ತೆರಳಲು ಪರದಾಟ *ಪರೀಕ್ಷೆಗಳಿಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸ

ರಾಯಚೂರು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯು ಶ್ರೀಶೈಲಕ್ಕೆ ತೆರಳುವವರಿಗೆ ವಿಶೇಷ ಬಸï ಸೌಲಭ್ಯ ಕಲ್ಪಿಸುವ ಭರದಲ್ಲಿ ಉಳಿದ ಸ್ಥಳಗಳಿಗೆ ಬಸ್ ಸಂಚಾರ ಮಿತಿಗೊಳಿಸಿದೆ. ಪರಿಣಾಮ ಕಳೆದೊಂದು ವಾರದಿಂದ ಜಿ¯್ಲೆಯ ಜನತೆ ಬಸ್‌ಗಳಿಗೆ ಪರದಾಡುವಂತಾಗಿದೆ.

ಈಗಾಗಲೇ ಸರ್ಕಾರದ ಉಚಿರ ಬಸï ಪ್ರಯಾಣ ಯೋಜನೆ ಶಕ್ತಿಯ ಜÁರಿ ನಂತರದಲ್ಲಿ ನಷ್ಟದ ಹೊರೆ ತಗ್ಗಿಸಲು ಬಸï ಗಳ ಓಡಾಟದ ಮೇಲೆ ನಿಯಂತ್ರಣ ಹೇರಲಾಗಿದೆ. ಇದೀಗ ಶ್ರೀಶೈಲಕ್ಕೆ ಓಡಿಸಿ ಆದಾಯ ಗಳಿಕೆ ಅವಸರದಲ್ಲಿ ಸಂಸ್ಥೆಯು ಜನತೆಗೆ ಮತ್ತಷ್ಟು ಸಮಸ್ಯೆ ತೀವ್ರಗೊಳಿಸಿದೆ.

ಪ್ರಯಾಣಿಕರ ಪರದಾಟ

ಜಿಲ್ಲೆಯ ೭ ತಾಲೂಕಿನ ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ವ್ಯಾಪ್ತಿಯಲ್ಲಿ ಒಟ್ಟು ೧೪ ನಿಲ್ದಾಣಗಳ ೮ ಘಟಕಗಳು ಸೇರಿ ಒಟ್ಟು ೬೯೦ ಬಸ್‌ಗಳ ಪೈಕಿ ಕೆಕೆಎಸ್‌ಆರ್‌ಟಿಸಿ ವತಿಯಿಂದ ಆಂಧ್ರದ ಶ್ರೀಶೈಲಕ್ಕೆ ೨೮೦ ಬಸ್‌ಗಳನ್ನು ಬಿಡಲಾಗಿದ್ದರಿಂದ ನಗರ ಪ್ರದೇಶದಿಂದ ಅನ್ಯ ನಗರ,ಪಟ್ಟಣ ಸೇರಿ ಸ್ವಗ್ರಾಮಕ್ಕೆ ಬಂಧುಗಳ ಮನೆಗೆ ಬಂದಿದ್ದವರು ತೆರಳಲು ಸಮರ್ಪಕ ಬಸ್‌ಗಳು ಇಲ್ಲದೆ ಪರದಾಡುವಂತಾಯಿತು ನಿತ್ಯ ಸಿರವಾರ,ಲಿಂಗಸೂಗೂರು,ದೇವದುರ್ಗ,ಸಿAಧನೂರು ಕಡೆಗೆ ತೆರಳಲು ಸಾಕಷ್ಟು ಜನ ಓಡಾಡುತ್ತಾರೆ. ಆದರೆ, ಕಳೆದ ಒಂದು ವಾರದಿಂದ ಬೆಂಗಳೂರು ಸೇರಿ ಇತರೆಡೆಗೆ ತೆರಳಲು ಹೆಚ್ಚು ಪ್ರಯಾಣಿಕರಿದ್ದರೂ ಸಮರ್ಪಕ ಬಸ್‌ಗಳು ಇಲ್ಲದ ಕಾರಣ ಹಲವರು ಕೆಕೆಎಸ್‌ಆರ್‌ಟಿ ಅಽಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಬಸ್‌ಗಳೂ ಬಂದರೂ ನುಕ್ಕುನುಗ್ಗಲು ಉಂಟಾಗಿತ್ತು. ಖಾಸಗಿ ವಾಹನಗಳ ಟಾಪ್ ಮೇಲೆ ಕುಳಿತುಕೊಂಡು ಹೋಗುವ ದೃಶ್ಯವೂ ಕಂಡುಬAದವು. ಜತೆಗೆ, ಯಾವ, ಯಾವ ಮಾರ್ಗಗಳಿಗೆ ಬಸ್‌ಗಳು ಎಷ್ಟು ಗಂಟೆಗೆ ಬರುತ್ತವೆ ಎಂಬುದರ ಬಗ್ಗೆ ನಿಲ್ದಾಣದ ಬಳಿ -Àಲಕದಲ್ಲಿ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಪ್ರಯಾಣಿಕರು ಬಂದ ಬಸ್‌ಗಳತ್ತ ದೌಡಾಯಿಸಿ ವಿಚಾರಿಸುತ್ತಿದ್ದರು. ಜತೆಗೆ ಬಸï ಮಾಹಿತಿ ಕೇಳಲು ನಿಲ್ದಾಣದಲ್ಲಿರುವ ಸಿಬ್ಬಂದಿಯನ್ನು ವಿಚಾರಿಸಿದರೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡರು.

ಅಯೋಮಯ

ಶಕ್ತಿ ಯೋಜನೆ ಜÁರಿಯಾದ ನಂತರ ಬಸ್‌ಗಳ ಸ್ಥಿತಿ ಅಯೋಮಯವಾಗಿದೆ. ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರ ಸಂದಣಿ ಹೆಚ್ಚಿದ್ದು, ಬಸ್ ಸಹವಾಸವೇ ಬೇಡ ಎನ್ನುವಂತಾಗಿದೆ. ಪ್ರಸ್ತುವಾಗಿ ನಗರದ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಚಾರಿಸುವ ಬಹುತೇಕ ಬಸ್‌ಗಳು ಹಳೆಯಾದಿದ್ದು, ನಿರ್ವಹಣೆ ಇಲ್ಲದೆ ಎಲ್ಲಂದರಲ್ಲಿ ನಿಂತು ಪ್ರಯಾಣಿಕರು ಪರದಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅಽಕಾರಿಗಳಿಗೆ ಅರಿವಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿz್ದÁರೆ.

ಪರೀಕ್ಷೆ ತೆರಳಲು ವಿದ್ಯಾರ್ಥಿಗಳ ಪರದಾಟ

ಕಳೆಚ ಮೂರು ದಿನಗಳಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪದವಿ ಕಾಲೇಜುಗಳು ಪರೀಕ್ಷೆಗಳು ನಡೆಯುತ್ತಿದ್ದು, ಆದರೆ ಬಸ್‌ಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವಂತಾಗಿದೆ, ವಿದ್ಯಾರ್ಥಿಗಳನ್ನು ಕಂಡರೆ ಕೆಲವರು ಬಸ್‌ಗಳಿಗೆ ಹತ್ತಿಸಿಕೊಳ್ಳುತ್ತಿಲ್ಲ. ಇದರಿಂದ ಪರೀಕ್ಷೆಗೆ ತೆರಳಲು ಸಮಸ್ಯೆಯಾಗಿದೆಂದು ವಿದ್ಯಾರ್ಥಿಗಳು ಅಳಲು ತೊಂಡಿಕೊAಡರು.

ಯುಗಾದಿ ಹಬ್ಬದ ನಿಮಿತ್ತ ರಾಯಚೂರು ಜಿಲ್ಲೆಯಿಂದ ಆಂಧ್ರದ ಶ್ರೀಶೈಲಕ್ಕೆ ಒಟ್ಟು ೨೮೦ ಬಸ್‌ಗಳನ್ನು ಬಿಡಲಾಗಿತ್ತು. ಆದರೆ ಎಸ್‌ಎಸ್‌ಎಲ್‌ಸಿ ಸೇರಿ ವಿವಿಧ ಪರೀಕ್ಷೆಗಳು ಇರುವುದರಿಂದ ಇಂದಿನಿAದ ಕೆಲವು ಬಸ್‌ಗಳನ್ನು ನಿಲ್ಲಿಸಲಾಗಿದ್ದು, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಅಗದಂತೆ ಇಲಾಖೆ ಮುಂದಾಗುವುದು.

ಚAದ್ರಶೇಖರ ಡಿಟಿಓ ಕೆಕೆಆರ್‌ಟಿಸಿ ರಾಯಚೂರು