ಜಿಲ್ಲೆ

ಯುವ ಜನತೆ ಓದಿನ ಕಡೆ ಗಮನ ಹರಿಸಲಿ

ಪ್ರಸಿನ್ ಕೆ.ಆರ್

ಸರಗೂರು: ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ತಾಲೂಕಿನ ಯುವ ಜನರು ದೂರ ಉಳಿಯುತ್ತಿದ್ದು, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿರುವುದು ಮಾದರಿ ಕಾರ್ಯವಾಗಿದೆ ಎಂದು ಪ.ಪಂ. ಸದಸ್ಯ ಚೆಲುವ ಕೃಷ್ಣ ಹೇಳಿದರು.

ಪಟ್ಟಣದ 11ನೇ ವಾರ್ಡ್‌ನ ಬಿಡಗಲು ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂಘ ಮತ್ತು ನವಚೈತನ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಬಳಗದವತಿಯಿಂದ ನಿರ್ಮಿಸಿರುವ ನಳಂದ ಅಧ್ಯಯ ಕೇಂದ್ರ ಗ್ರಂಥಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ವಾರ್ಡಿನ ಯುವಕರು ಜನರಿಗೆ ಉಪಯೋಗವಾಗಲಿ ಎನ್ನುವ ನಿಟ್ಟಿನಲ್ಲಿ ನಳಂದ ಗ್ರಂಥಾಲಯವನ್ನು ಪ್ರಾರಂಭ ಮಾಡಿದ್ದಾರೆ. ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಶಿಕ್ಷಣ, ಓದಿನ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ. ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಭರತೇಶ್ ಗುರೂಜಿ ಮಾತನಾಡಿ, ಮನೆಯ ಮಾಲೀಕರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು. ಪುಸ್ತಕಗಳ ಖರೀದಿ ಹಾಗೂ ಅವುಗಳನ್ನು ಸುಸಜ್ಜಿತವಾಗಿ ಇಡುವ ಜವಾಬ್ದಾರಿ ಮಾಲೀಕರದ್ದಾಗಿರುತ್ತದೆ ಎಂದರು.

ಗ್ರಾಮದ ಯಜಮಾನ ನಾಗಯ್ಯ, ಸೋಮೇಶ್, ನಿವೃತ್ತ ಶಿಕ್ಷಕ ದೊಡ್ಡಯ್ಯ, ನಿವೃತ್ತ ಪಶು ವೈದ್ಯಾಧಿಕಾರಿ ಕೃಷ್ಣ ರಾಜು, ಸಣ್ಣ ಮುದ್ದಯ್ಯ, ಕುಳ್ಳಯ್ಯ, ಪ್ರಕಾಶ್, ಸ್ವಾಮಿನಾಥನ್, ಕೃಷ್ಣ ದೊಡ್ಡ ಪಾಜಿ, ಗೋಪಾಲಯ್ಯ, ಶಿವಣ್ಣ, ಚಿಕ್ಕಸ್ವಾಮಿ, ಗೋಪಾಲಕೃಷ್ಣ, ಮುಖ್ಯಶಿಕ್ಷಕ ಚಿನ್ನಸ್ವಾಮಿ, ಗೋಪಾಲಯ್ಯ, ಬಸವರಾಜು,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿ ಸಿ ಶಿವಣ್ಣ, ರಾಜು, ಗೋಪಾಲಕೃಷ್ಣ, ನಿಂಗರಾಜು, ಸೋಮೇಶ್, ದೇವರಾಜು,ನವಚೈತನ್ಯ ಡಾ ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾರ್ಯದರ್ಶಿಗಳು ಎಲ್ಲಾ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಹಾಜರಿದ್ದರು.