ಜಿಲ್ಲೆ

27ರಿಂದ ಬಾದರದಿನ್ನಿ ರಂಗೋತ್ಸವ

ಚಿತ್ರದುರ್ಗ: ನಗರದ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಶ್ರಯದಲ್ಲಿ ಬಾದರದಿನ್ನಿ ರಂಗೋತ್ಸವವನ್ನು ನ. 27ರಂದು ಸಂಜೆ 5.30ಕ್ಕೆ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ. ಎಂ. ವೀರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಕರ್ಮಿಗಳಾದ ನಾ.ಶ್ರೀನಿವಾಸ ಪಾಪು, ಮಹಂತೇಶ್ ಗಜೇಂದ್ರಗಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಅಕಾಡೆಮಿ ಅಧ್ಯಕ್ಷೆ ಅನಸೂಯಾ ಬಾದರದಿನ್ನಿ ಉಪಸ್ಥಿತರಿರುವರು.

‘ಕನಸಿನವರು’ ನಾಟಕವನ್ನು ಅಕಾಡೆಮಿ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. 28ರಂದು ಸಂಜೆ 5.30ಕ್ಕೆ ನಡೆಯುವ ಕಾರ‌್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಾಹಿತಿ ಡಾ.ಜಿ.ಎನ್.ಮಲ್ಲಿಕಾರ್ಜುನ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಂಬುನಾಥ್, ರಂಗಕರ್ಮಿಗಳಾದ ಕೆಪಿಎಂ. ಗಣೇಶಯ್ಯ, ಸಿ.ಪಿ. ಜ್ಞಾನದೇವ ಭಾಗವಹಿಸಲಿದ್ದಾರೆ.

ಎಚ್.ಎನ್. ಭೀಮೇಶ್ ನಿರ್ದೇಶನದ ವಿ.ಎಸ್.ಅಶ್ವಥ್ ರಚನೆ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಧಾತ್ರಿ ರಂಗ ಸಂಸ್ಥೆ ಪ್ರಸ್ತುತ ಪಡಿಸಲಿದೆ ಎಂದು ಅಕಾಡೆಮಿ ಕಾರ‌್ಯದರ್ಶಿ ಪ್ರಕಾಶ್ ಬಾದರದಿನ್ನಿ ತಿಳಿಸಿದ್ದಾರೆ.