ಜಿಲ್ಲೆ

27ರಿಂದ ಕುಷ್ಠರೋಗ ಪತ್ತೆ ಅಭಿಯಾನ,ಎಡಿಸಿ

ಚಿತ್ರದುರ್ಗ: ಪೊಲಿಯೋದಂತೆ, ಕುಷ್ಠರೋಗವನ್ನೂ ದೇಶದಿಂದ ನಿರ್ಮೂಲನೆ ಮಾಡಬೇಕೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಡಿಸಿ ಕಚೇರಿ ಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,‘ಕುಷ್ಠರೋಗ ಮುಕ್ತ ಚಿತ್ರದು ರ್ಗ ಜಿಲ್ಲೆ’ಘೋಷಣೆಯಡಿ ಡಿ.27ರಿಂದ 2024 ಜನವರಿ 11ರವರೆಗೆ ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ನಡೆಯಲಿದೆ. ಈ ಅಭಿಯಾನ ಶೇ.100ರ ಪ್ರಮಾಣದಲ್ಲಿ ಯಶಸ್ವಿಯಾಗಬೇಕು.
ರೋಗದ ಲಕ್ಷಣ, ಸ್ವರೂಪದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಅಭಿಯಾನದ ಯಶಸ್ವಿಗೊಳಿಸಲು ತಾಲೂಕು ಮಟ್ಟ ದಲ್ಲಿ ಅಧಿಕಾರಿಗಳ ಸಭೆ ನಡೆಸ ಬೇಕೆಂದರು. ಜಿಲ್ಲೆಯಲ್ಲಿ ಸದ್ಯ 61 ಕುಷ್ಠರೋಗ ಪ್ರಕರಣಗಳಿವೆ. ಚಳ್ಳಕೆರೆ ತಾಲೂಕಿನಲ್ಲಿ ಗರಿಷ್ಠ 29 ಪ್ರಕರಣಗಳು ಪತ್ತೆಯಾಗಿವೆ. ಚಿತ್ರದುರ್ಗ 14, ಮೊಳ ಕಾಲ್ಮೂರು 8, ಹೊಳಲ್ಕರೆ 7 ಹಾಗೂ ಹಿರಿಯೂರು ತಾಲೂಕಿನಲ್ಲಿ 3 ಪ್ರಕರಣಗಳಿದ್ದು,ಹೊಸದುರ್ಗದ ಲ್ಲಿ ಯಾವುದೇ ಪ್ರಕರಣಗಳು ಇಲ್ಲವೆಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದರು. ಕುಷ್ಠರೋಗ ಪತ್ತೆ ಅಭಿಯಾನಕ್ಕೆಂದು 1469 ತಂಡಗಳನ್ನು ರಚಿಸಿ,ತರಬೇತಿ ನೀಡಲಾಗಿದೆ. ಪ್ರತಿ ದಿನ ಬೆಳಗ್ಗೆ 7 ರಿಂದ 11ರವರೆಗೆ ಸಮೀಕ್ಷೆ ನಡೆಯಲಿದೆ ಎಂದರು.
ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್,ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಆರ್‌ಎಂಒ ಡಾ.ಆನಂದ್‌ಪ್ರಕಾಶ್,ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಇತರರು ಇದ್ದರು. ಈ ಸಂದರ್ಭದಲ್ಲಿ ಅಭಿಯಾನದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
(ಸಿಟಿಡಿ 19 ಕುಷ್ಠ)
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಕುಷ್ಠ ರೋಗ ಪತ್ತೆ ಅಭಿಯಾನದ ಭಿತ್ತಿ ಪತ್ರವನ್ನು ಎಡಿಸಿ ಬಿ.ಟಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಡಾ.ನಾಗರಾಜ,ಭಾರತಿ ಆರ್.ಬಣಕಾರ್, ಕಾಂತ ರಾಜ್, ಡಾ.ಬಿ.ವಿ.ಗಿರೀಶ್,ಡಾ.ಆನಂದ್‌ಪ್ರಕಾಶ್,ಡಾ.ಸಿ.ಒ.ಸುಧಾ ಇತರರು ಇದ್ದರು.