ಕಲಬುರಗಿ: ಚಿಂಚೋಳಿ, ಚಿತ್ತಾಪೂರ, ಸೇಡಂ, ಕಮಲಾಪೂರ ಭಾಗದ 370 ಹಳ್ಳಿಯ ರೈತರು 20 ಲಕ್ಷ ಟನ ಕಬ್ಬು ಬೆಳೆದಿದ್ದಾರೆ,ಜಿಲ್ಲಾಡಳಿತ ಹತ್ತಿರ ನಿಖರ ವರದಿ ಇಲ್ಲಾ, ಜಿಲ್ಲಾಡಳಿತ FRP ಪ್ರಕಾರ ಇನ್ನು ದರ ನಿಗದಿ ಮಾಡಿಲ್ಲಾ, ಅವೈಜ್ಞಾನಿಕ ವಾದ ವರದಿ ಮೂಲಕ ಕಬ್ಬು ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ಸೇಡಂ ಗಂಭೀರವಾಗಿ ಆರೋಪಿಸಿದ್ದಾರೆ.
ಚಿಂಚೋಳಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿ ಕಳೆದ ಒಂದು ತಿಂಗಳಿನಿಂದ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರ ಕಬ್ಬು ಖರೀದಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೆಂಬಲ ಸೂಚಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದ ರೈತರು ಸಿದ್ದಸಿರಿ ಕಂಪನಿ ನಂಬಿ ಕಬ್ಬು ಬೆಳೆದಿದ್ದಾರೆ ಬೆರೆ ಕಂಪನಿ ನಂಬಿ ಇಲ್ಲಾ,ರೈತ ವಿರೊಧಿಧೊರಣೆ ಸರಿಯಲ್ಲಾ,ರೈತರ ಹೊರಾಟ ನಿಲ್ಲುವ ಪ್ರಶ್ನೆಯೆ ಇಲ್ಲಾ,ಕಂಪನಿ ಕೃಪ ಪೊಷಿತ ಅಂತಾ ಹೇಳಿಕೆ ನೀಡುತ್ತಿರುವ ನಾಲಾಯಕ ಕಾಂಗ್ರೆಸ್ ಮುಖಂಡರೆ,ಇದು ಪಕ್ಷಾತಿತ ಪ್ರತಿಭಟನೆಯಾಗಿದೆ. ಈ ಭಾಗದ ರೈತರ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗದೇ, ಅಭಿವೃದ್ಧಿ ಚಿಂತನೆ ಮಾಡದೆ ಕೇವಲ ಯಾರನ್ನೊ ತೃಪ್ತಿ ಪಡಿಸಲು ರೈತರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಆನೆಗೆ ಅರೆಕಾಸಿನ ಮಜ್ಜಿಗೆ ಕುಡಿಸಿದಂತೆ ವರ್ತಿಸುತ್ತಿರುವುದು ಖಂಡನಿಯ, ಹಲವು ದಿನಗಳಿಂದ ಹೊರಾಟ ನಡೆಸುತ್ತಿದ್ದರುತಮಗೆ ಸಂಬಂಧವಿಲ್ಲದಂತೆ ಸಚಿವರುಗಳು ವರ್ತಿಸುತ್ತಿರುವುದು ಖಂಡನಿಯ, ಇದೆ 27 ರಂದು ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಜಿಲ್ಲಾದ್ಯಂತ ಇರುವ ಮಠಾಧಿಶರುಗಳು,ರೈತ ಮುಖಂಡರು, ಕಬ್ಬು ಬೆಳೆಗಾರರು,ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಬೃಹತ್ ಸಭೆ ಆಯೋಜಿಸುವ ಮೊಲಕ ಸರ್ವರ ಸಲಹೆ ಸೂಚನೆ ಮೆರೆಗೆ ಮುಂದಿನ ಉಗ್ರ ಹೊರಾಟ ಹಾಗೂ ರೈತರ ,ಕ್ರಾಂತಿಕಾರಿ ಹೊರಾಟಕ್ಕೆ ಸಂಪೂರ್ಣ ಬೆಂಬಲ ನಿಡಬೇಕೆಂದು ಮನವಿ ಮಾಡಿದರು, ಕಲಬುರಗಿಯ ಸಚಿವರು ಸಂಸದರು ಕಬ್ಬು ಬೆಳೆಗಾರರ ಮನವಿ ಸ್ಪಂದಿಸಿ ನ್ಯಾಯ ಒದಗಿಸುತ್ತೆವೆ ಅಂತಾ ಹಿಂಬರಹ ಕೊಟ್ಟಿದ್ದಾರೆ,ಆದರೆ ಬೀದರ ಸಂಸದರು ಸಚಿವರು ಯಾವುದೆ ಸ್ಪಂದನೆ ನಿಡಿಲ್ಲಾ ಇದು ಅತ್ಯಂತ ಖಂಡನೀಯ. ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ನಿಲುವು ತೀವೃವಾಗಿ ಖಂಡಿಸಲಾಗುವುದು ಎಂದು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ನಂದಿಕುಮಾರ ಪಾಟೀಲ, ಶಿವಶರಣ ನಿಡಗುಂದಾ, ಶಿವಶರಣಪ್ಪ ಜಾಪಟ್ಟಿ, ಬಸವರಾಜ ಹೆಂಡಿ ಇತರರು ಇದ್ದರು.