ಮನೆ ಕಳೆದುಕೊಂಡ ಫಲಾನುವಭವಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಆದಿಕರ್ನಾಟಕ ಮಹಾಸಭಾ, ಸಂವಿಧಾನ ಸಂರಕ್ಷಣಾ ಸಮಿತಿ ಸಭೆ ನಡೆಸಿತು. ಅಧ್ಯಕ್ಷರಾದ ಸರಗೂರು ಶಿವಣ್ಣ, ಬೀರ್ವಾಳ್ ಬಸವರಾಜು ಇತರರು ಇದ್ದರು. 
ಜಿಲ್ಲೆ

27ರಂದು ಅಹೋರಾತ್ರಿ ಧರಣಿಗೆ ತೀರ್ಮಾನ


ಆನ್‌ಲೈನ್ ಪಟ್ಟಿಯಿಂದ ಫಲಾನುಭವಿಗಳ ಹೆಸರು ಕೈಬಿಟ್ಟಿರುವುದಕ್ಕೆ ಖಂಡನೆ

ಸರಗೂರು: ಮಳೆಗೆ ಮನೆ ಕಳೆದುಕೊಂಡ ಫಲಾನುಭವಿಗಳನ್ನು ಆನ್‌ಲೈನ್ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಅ.27ರಂದು ಸರಗೂರು ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಲು ಸರಗೂರು ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಆದಿ ಕರ್ನಾಟಕ ಮಹಾಸಭಾ ತೀರ್ಮಾನಿಸಿವೆ.

ತಾಲೂಕು ಪ್ರವಾಸಿ ಮಂದಿರದಲ್ಲಿ ಶನಿವಾರ ಅಧ್ಯಕ್ಷರಾದ ಸರಗೂರು ಶಿವಣ್ಣ ಹಾಗೂ ಬೀರ್ವಾಳ್ ಬಸವರಾಜು ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸರಗೂರು ತಾಲೂಕು ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಲ್ಲಿ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಕುರಿತು ಗ್ರಾಮಲೆಕ್ಕಿಗರು, ರಾಜಸ್ವ ನೀರೀಕ್ಷಕರು, ಇಂಜಿನಿಯರ್, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ವರದಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಆದೇಶದಂತೆ ಫಲಾನುಭವಿಗಳನ್ನು ಅರ್ಹರೆಂದು ಆಯ್ಕೆ ಮಾಡಿ ಆನ್‌ಲೈನ್ ಪಟ್ಟಿಯಲ್ಲಿ ಸೇರಿಸಿದ್ದಾರೆ. ಆದರೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅರ್ಹ ಫಲಾನುಭವಿಗಳನ್ನು ಕೈಬಿಡಲಾಗಿದೆ. ಹೀಗಾಗಿ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳ್ ಬಸವರಾಜು ತಿಳಿಸಿದರು.

ಆದಿಕರ್ನಾಟಕ ಪ್ರಧಾನ ಕಾರ್ಯದರ್ಶಿ ಚನ್ನಿಪುರ ಮಲ್ಲೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಇಟ್ನಾ ರಾಜಣ್ಣ, ಮುಳ್ಳೂರು ಗ್ರಾಪಂ ಅಧ್ಯಕ್ಷ ಗೋವಿಂದ ಚಾರ್, ಮಹೇಶ್, ಪುರದಕಟ್ಟೆ ಬಸವರಾಜು, ಹಂಚಿಪುರ ಬಸವಣ್ಣ, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕಲ್ಲಂಬಾಳು ನಾಗಣ್ಣ, ನಾಗರಾಜು, ಶಿವು, ಚಂದ್ರಶೇಖರ್, ಚನ್ನಿಪುರ ನಾಗರಾಜು, ಬೆಟ್ಟನಾಯಕ, ಹಳಿಯೂರು ಚಿನ್ನಣ್ಣ, ಹಾದನೂರು ಮಹದೇವಸ್ವಾಮಿ, ಸೋಮಣ್ಣ ಇತರರು ಇದ್ದರು.