ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಸೆ.೨೭ರಂದು ನಗರಕ್ಕೆ ಆಗಮಿಸುವರು. ಬೆಳಗ್ಗೆ ೯ಕ್ಕೆ ಚಿತ್ತಾಪುರಕ್ಕೆ ಪಯಣ ಬೆಳೆಸುವರು. ೧೦.೩೦ಕ್ಕೆ ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು.
ಮಧ್ಯಾಹ್ನ ೩ಕ್ಕೆ ರಾವೂರಿನ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಸಂಭ್ರಮ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ ೬.೪೫ಕ್ಕೆ ಕಲಬುರಗಿಯ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಕೋಟಿ ಸದಸ್ಯತ್ವ ಅಭಿಉಯಾನಕ್ಕೆ ಚಾಲನೆ ನೀಡುವರು. ರಾತ್ರಿ ೮೩೫ಕ್ಕೆ ಬೆಂಗಳೂರಿಗೆ ಪಯಣ ಬೆಳೆಸುವರು.