ಕಲಬುರಗಿ: ಜಿಲ್ಲೆಯಲ್ಲಿ ಈವರೆಗೆ 3820 ಜನ ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿದ್ದು, ಈ ಪೈಕಿ 44 ಪಾಸಿಟಿವ್ ಬಂದಿವೆ. ಇದರಲ್ಲಿ ಏಳು ಜನ ಗುಣಮಖರಾಗಿದ್ದಾರೆ. ನಾಲ್ಕು ಜನ ಸಾವನ್ನಪ್ಪಿದ್ದು, 2777 ಜನರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಈವರೆಗೆ ಒಟ್ಟು 3820 ಜನರ ಸ್ಯಾಂಪಲ್ ಡ್ರಾ ಮಾಡಿ ಟೆಸ್ಟ್ಗೆ ಕಳುಹಿಸಲಾಗಿತ್ತು. 999 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ನಗರದ ವಾರ್ಡ ನಂ.14, 30 ಮತ್ತು ಶಹಾಬಾದ್ ಸೇರಿ ಒಟ್ಟು 20 ಕಾಂಟೇನ್ಮೆಂಟ್ ಝೋನ್ ಇದ್ದು, ಈ ಝೋನ್ಗಳಲ್ಲಿ 43986 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದ್ದಾರೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 712, ಸೆಕೆಂಡರಿ ಕಾಂಟ್ಯಾಕ್ಟ್ಸ್ 2535, ವಿದೇಶದಿಂದ ಬಂದವರು 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1486 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 981 ಜನರನ್ನು ಮುಕ್ತಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 992 ಜನರನ್ನು ಮುಕ್ತಗೊಳಿಸಿ ಈ ನಂತರವೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸ್ವಯಂ ಪ್ರೇರಣೆಯಿಂದ ವರದಿ ಮಾಡುವಂತೆ ಸೂಚಿಸಲಾಗಿದೆ. 187 ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾರ್ಡನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.