ಜಿಲ್ಲೆ

ಲೋಕ ಅದಾಲತ್‌ನಲ್ಲಿ 275 ಪ್ರಕರಣ ಇತ್ಯರ್ಥ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಹೈಕೋರ್ಟ್ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 275 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಹಿರಿಯ ನ್ಯಾಯಮೂರ್ತಿಗಳಾದ ಆರ್. ದೇವದಾಸ್, ಪ್ರದೀಪ್‌ಸಿಂಗ್ ಯೆರೂರ, ರಾಜೇಶ ರೈ ಕೆ. ಮತ್ತು ಕೆ.ವಿ. ಅರವಿಂದ್, ಸದಸ್ಯರಾದ ಕೆ.ಎಲ್. ಪಾಟೀಲ, ಆರ್.ಎಚ್. ಅಂಗಡಿ, ಎಂ.ಸಿ. ಹುಕ್ಕೇರಿ ಮತ್ತು ಎಂ.ಟಿ. ಬಾಂಗಿ ಅವರನ್ನೊಳಗೊಂಡ 4 ಪೀಠಗಳನ್ನು ಆಯೋಜಿಸಲಾಗಿತ್ತು.

ಅದಾಲತ್‌ನಲ್ಲಿ 1,576 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 275 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ, ಚೆಕ್ ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು, ಸಿವಿಲ್ ಪ್ರಕರಣಗಳು, ರಿಟ್ ಅರ್ಜಿಗಳು ಸೇರಿ ಹಲವು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.