ಸುದ್ದಿಗೋಷ್ಠಿಯಲ್ಲಿ ಅಶೋಕ ಕಟಾರಿಯಾ ಮಾತನಾಡಿದರು. ವೀರಧವಲ ಉಪಾಧ್ಯೆ, ಅಮಿತ ದೋಷಿ, ಮಾಯಾ ಜೈನ, ದೀಪಕ ಸುಬೇದಾರ, ಪುಷ್ಪಕ ಹನಮಣ್ಣವರ ಇದ್ದರು. 
ಜಿಲ್ಲೆ

27ರಿಂದ ಎರಡು ದಿನಗಳ ಜೈನ ಉತ್ಸವ

ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಝೇಶನ್ (ಜಿತೋ)ನಿಂದ ಆ. 27, 28ರಂದು ಕೆಎಲ್‌ಇ ಡಾ.ಬಿ.ಎಸ್. ಜಿರಗೆ ಸಭಾಂಗಣದಲ್ಲಿ ಮೂರನೇ ಆವೃತ್ತಿಯ ಜೈನ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಬೆಳಗಾವಿ ವಿಭಾಗದ ಮುಖ್ಯ ಕಾರ್ಯದರ್ಶಿ ಅಶೋಕ ಕಟಾರಿಯಾ ತಿಳಿಸಿದರು.

ನಗರದಲ್ಲಿ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.27ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದೆ. ಜಿತೋ ಅಪೆಕ್ಸ್ ಜೆಬಿಎನ್ ಮುಖ್ಯಸ್ಥ ರಾಜೇಶ ಚಂದನ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಪ್ರೇರಕ ಕಥಾಗಾರ ಶಾಂತಿಲಾಲ ಗುಲೆಛಾ, ಕಿಶನ್ ಭಾಗವಹಿಸುವರು.
ಮಧ್ಯಾಹ್ನ ಜಿತೋ ಜಾಬ್ಸ್ ಯೋಜನೆಯಡಿ ನಿರುದ್ಯೋಗ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಸಂಜೆ ರಿಷಬ್ ಮತ್ತು ಸಂಭವ ಅವರಿಂದ ರಸಮಂಜರಿ ಕಾರ್ಯಕ್ರಮವಿದೆ ಎಂದರು.

ಆ.28ರಂದು ಬೆಳಗ್ಗೆ ಶಾರ್ಕ್ ಟ್ಯಾಂಕ್ ಕಾರ್ಯಕ್ರಮವಿದೆ. ಓಂ ಜೈನ, ಯಶ ರಾಜೇಂದ್ರ, ಅರುಣ ಲಾಲವಾಣಿ, ವಿನೋದ ಜೈನ, ಶಿಖಾ ಹರಣ, ಸೇರಿ ಇತರ ಹಣ ಹೂಡಿಕೆದಾರರು ಭಾಗವಹಿಸುವರು. ಬಳಿಕ ಯುನಿಕಾರ್ನ್ ಸ್ಪೀಕರ್ ಸೌರಭ ಜೈನ ಅವರಿಂದ ಪ್ರೇರಣಾ ಭಾಷಣ ಕಾರ್ಯಕ್ರಮವಿದೆ. ಸಂಜೆ ರಿಶ್ತೆ ಜೈನ ವಧುವರ ಸಮಾವೇಶ ಮತ್ತು ಜೈನ್ಸ್ ಟ್ಯಾಲಂಟ್ ಕಾರ್ಯಕ್ರಮವಿದೆ ಎಂದರು.

ಈ ಎರಡು ದಿನಗಳ ಕಾರ್ಯಗಳಿಗಾಗಿ ನೋಂದಣಿ ಕಡ್ಡಾಯವಿದ್ದು ಜಿತೋ ಸಂಸ್ಥೆಯ ಕಚೇರಿ ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಜೈನ ಉತ್ಸವ ಸಂಯೋಜಕ ಅಮಿತ ದೋಷಿ, ಸಹ ಸಂಯೋಜಕ ಪುಷ್ಪಕ ಹನಮಣ್ಣವರ, ಜಿತೊ ಲೇಡಿಸ್ ಅಧ್ಯಕ್ಷೆ ಮಾಯಾ ಜೈನ, ಜಿತೋ ಯೂತ್ ವಿಂಗ್ ಅಧ್ಯಕ್ಷ ದೀಪಕ ಸುಬೇದಾರ, ರಾಹುಲ ಹಜಾರೆ, ಅಭಯ ಆದಿಮನಿ, ಕುಂತಿನಾಥ ಕಲಮನಿ, ರಾಜ ದೊಡ್ಡಣ್ಣವರ, ನವರತ್ನ ಜೈನ ಇದ್ದರು.