ಕಾಗವಾಡ: ತಾಲೂಕಿನ ಉಗಾರ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಏ.18ರಂದು ಲಾಕ್‌ಡೌನ್ ನಿಯಮಾವಳಿ ಉಲ್ಲಂಘಿಸಿ ಪ್ರತಿಭಟಿಸಿದ ಕೆಲ ಪುರಸಭೆ ಸದಸ್ಯರು ಸೇರಿ 27 ಜನರ ಮೇಲೆ ಸ್ಥಳೀಯ ಠಾಣೆಯಲ್ಲಿದ ದೂರು ದಾಖಲಾಗಿದೆ.
ಉಗಾರ ಪಟ್ಟಣದಲ್ಲಿ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಕರೊನಾ ಶಂಕಿತರನ್ನು ಲಾಡ್ಜ್‌ನಲ್ಲಿ ಕ್ವಾರಂಟೈನ್‌ಗೆ ಇಡಬಾರದು ಎಂದು ಆಗ್ರಹಿಸಿ ಶನಿವಾರ ಉಗಾರ ಪುರಸಭೆ ಎದುರು ನೂರಾರು ಜನರು ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ್ದರು. ಆದೇಶ ಉಲ್ಲಂಘನೆ ಆರೋಪದಡಿ 27 ಜನರ ಮೇಲೆ ಐಪಿಸಿ ಕಲಂ 144, 149, 188, ಮತ್ತು 51ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಾಗವಾಡ ಪಿಎಸ್‌ಐ ಹನುಮಂತ ಶಿರಹಟ್ಟಿ ತಿಳಿಸಿದ್ದಾರೆ.