ಜಿಲ್ಲೆ

26ರಂದು ಬೊಂಬೇರಹಳ್ಳಿಯಲ್ಲಿ ಗಿರಿಜನ ಉತ್ಸವ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಳ್ಳಕೆರೆ ತಾಲೂಕು ದೇವರಮರಿಕುಂಟೆ ಗ್ರಾಪಂ ಸಂಯುಕ್ತಶ್ರಾಯದಲ್ಲಿ ನ.26ರಂದು ಸಂಜೆ 4ಕ್ಕೆ ಬೊಂಬೇರಹಳ್ಳಿ ಬಯಲು ರಂಗಮಂದಿರದಲ್ಲಿ ಗಿರಿಜನ ಉತ್ಸವ ಏರ್ಪಡಿಸಲಾಗಿದೆ.
ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ದೇವರಮರಿಕುಂಟೆ ಗ್ರಾಪಂ ಅಧ್ಯಕ್ಷೆ ರಾಧಮ್ಮ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ತಹಸೀಲ್ದಾರ್ ರೆಹಾನ್‌ಷಾಷ, ತಾಪಂ ಇಒ ಎಚ್.ಶಶಿಧರ್, ಬಿಇಒ ಸುರೇಶ್, ಗ್ರಾಪಂ ಉಪಾಧ್ಯಕ್ಷೆ ದುರ್ಗಮ್ಮ ಹನುಮಂತಪ್ಪ, ಪಿಡಿಒ ಜೆ.ಶಶಿಕಲಾ, ಸದಸ್ಯರಾದ ರಾಜಮ್ಮ ಡಿ.ಹುಚ್ಚಪ್ಪ, ಟಿ.ಲೋಕೇಶಪ್ಪ, ಎಲ್.ವಿಶ್ವನಾಥ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ ಭಾಗವಹಿಸುವರು. ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ ಅವರು ವಿಶೇಷ ಉಪನ್ಯಾಸ ನೀಡುವರು.
ಉತ್ಸವದಲ್ಲಿ ಕರ್ನಾಟಕ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ, ಕೋಳಿಕುಣಿತ, ನಾಸಿಕ್‌ಡೋಲು, ನಂದಿ ಧ್ವಜ, ಗಾರುಡಿ ಗೊಂಬೆ, ಖಾಸಬೇಡರ ಪಡೆ ಮೊದಲಾದ ಕಲಾಪ್ರದರ್ಶನಗಳಿರುತ್ತವೆ. ಅಂದು ಸಂಜೆ 4 ಗಂಟೆ ಗೆ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಬಯಲು ರಂಗಮಂದಿರದವರೆಗೆ ಜಾನಪದ ಕಲಾತಂಡ ಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.