ಚಿತ್ರದುರ್ಗ: ಸಾಣೇಹಳ್ಳಿ ಶಿವಕುಮಾರ ಕಲಾ ಸಂಘ,ಜಿಲ್ಲಾ ಶರಣ ಸಾಹಿತ್ಯ ಪರಿಷತ್,ರಂಗಸೌರಭ ಕಲಾ ಸಂಘ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಕ ನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆ.26ರಂದು ಸಂಜೆ 6.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ನೀನಲ್ಲದೆ ಮ ತ್ತಾರೂ ಇಲ್ಲವಯ್ಯ’ಬಸವಣ್ಣನವರ 44 ವಚನಗಳ ಆಧರಿಸಿದ ನೃತ್ಯರೂಪಕವನ್ನು ಏರ್ಪಡಿಸಲಾಗಿದೆ ಎಂದು ಸಾಣೇಹಳ್ಳಿ ಶ್ರೀ ಡಾ.ಪಂಡಿ ತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈ ನೃತ್ಯರೂಪಕ(ಭರತನಾಟ್ಯ)ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನವಾಗಿದೆ. 2019ರಲ್ಲಿ ಸಾಣೇಹಳ್ಳಿ ಶಾಲೆಯ 100 ಮಕ್ಕಳು ಮುಂಬೈನಲ್ಲಿ ಪ್ರದರ್ಶಿಸಿದ ನೃತ್ಯ ರೂಪಕ,ಅಭಿಯಾನಕ್ಕೆ ನಾಂದಿಯಾಗಿದೆ.
ಸ್ನೇಹಾಕಪ್ಪಣ್ಣ ಅವರ ನೇತೃತ್ವ,ನಿರ್ದೇಶನದ ನೃತ್ಯರೂಪಕಕ್ಕೆ ಜೂನ್ 2ರಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾ ರೆ. ಈವರೆಗೆ ದೇಶದ ವಿವಿಧ 14 ರಾಜ್ಯಗಳಲ್ಲಿ ಪ್ರದರ್ಶನ ಕಂಡಿದ್ದು,ಮಂಗಳವಾರ ವಿಜಯಪುರದಲ್ಲಿ 42ನೇ ಪ್ರದರ್ಶನ ನಡೆದಿದೆ.
24 ಕಲಾವಿದೆಯರು,ಐವರು ತಂತ್ರಜ್ಞರ ಸಹಿತ 30 ಜನರ ಈ ತಂಡ 10 ಸಾವಿರಕ್ಕೂ ಹೆಚ್ಚು ಕಿ.ಮಿ.ದೂರ ಸುತ್ತಾಟ ನಡೆಸಿದೆ.ಇದ ರಲ್ಲಿರುವ ಆರು ಐಟಿ ಉದ್ಯೋಗಳ ಪೈಕಿ ರಜೆ ಸಿಗದ ಕಾರಣಕ್ಕೆ ನಾಲ್ವರು ಉದ್ಯೋಗ ತೊರೆದಿದ್ದಾರೆ. ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ ಎಂದರು.
ಬುಧವಾರದಿಂದ ಬಾಗಲಕೋಟೆ,ಇಳಕಲ್,ಶಿವಮೊಗ್ಗ,ಚಿತ್ರದುರ್ಗ,ದಾವಣಗೆರೆ,ತುಮಕೂರು,ಹುಳಿಯಾರು,ಚಿಕ್ಕಮಗಳೂರು, ಕ ಡೂರು ಸೇರಿದಂತೆ ವಿವಿಧೆಡೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಸೆ.2ರಂದು ಸಾಣೇಹಳ್ಳಿಯಲ್ಲಿ ಅಭಿಯಾನದ ಸಮಾರೋಪ ನಡೆಯಲಿದೆ.
ಅಂದಿನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸೇರಿದಂತೆ ನಾನಾ ಗಣ್ಯ ರು ಉಪಸ್ಥಿತರಿರುತ್ತಾರೆ. 1 ಗಂಟೆ 10 ನಿಮಿಷದ ಈ ನೃತ್ಯ ರೂಪಕಕ್ಕೆ ಅಂದಾಜು 60 ಲಕ್ಷ ರೂ.ವೆಚ್ಚವಾಗಲಿದೆ. ಅನುದಾನಕ್ಕೆ ಕೋರಿ ಕೇಂ ದ್ರ ಮತ್ತು ರಾಜ್ಯಸರ್ಕಾರಗಳಿಗೆ ಮನವಿ ಮಾಡಲಾಗಿದೆ ಎಂದರು. ನಿವೃತ್ತ ಪ್ರಾಚಾರ‌್ಯ ಐ.ಜಿ.ಚಂದ್ರಶೇಖರಯ್ಯ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್,ರಂಗನಿರ್ದೇಶಕ ಗಣೇಶಯ್ಯ ಇದ್ದರು.
(ಸಾಣೇಹಳ್ಳಿ ಶ್ರೀ ಮಗ್‌ಶಾಟ್)