ಜಿಲ್ಲೆ

26ನೇ ವರ್ಷದ ಸಂಭ್ರಮದಲ್ಲಿ ಮಣಿಪಾಲ್ ಎಲೆಕ್ಟ್ರಾನಿಕ್ಸ್

reportermys

ಮೈಸೂರು: ಪ್ರತಿಷ್ಠಿತ ಕಂಪನಿಗಳ ಗುಣಮಟ್ಟದ ಎಲೆಕಟ್ರೆಾನಿಕ್ ವಸ್ತುಗಳ ಮಾರಾಟದಲ್ಲಿ ಹೆಸರು ಮಾಡಿರುವ ಮಣಿಪಾಲ್ ಎಲೆಕ್ಟ್ರಾನಿಕ್ಸ್ 26ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.

ನಗರದ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ರಸ್ತೆ, ಕುವೆಂಪು ಪ್ರೌಢಶಾಲೆ ಹತ್ತಿರದಲ್ಲಿರುವ ಮಣಿಪಾಲ್ ಎಲೆಕ್ಟ್ರಾನಿಕ್ಸ್ 1996ರಂದು ಸಣ್ಣ ಅಂಗಡಿಯೊಂದರಲ್ಲಿ ಪ್ರಾರಂಭವಾಯಿತು. ಸದ್ಯ ನಗರದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ನ್ಯಾಯಯುತ ಬೆಲೆಯಲ್ಲಿ ಗ್ರಾಹಕರ ಕೈಗೆಟುಕುವ ದರದಲ್ಲಿ ಗುಣಮಟ್ಟದ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವ ಮೂಲಕ ಇಂದು ಲಕ್ಷಾಂತರ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ.

ಸರಸ್ವತಿಪುರಂನ ಮುಖ್ಯ ಅಂಗಡಿಯಲ್ಲಿ ಪ್ರತಿಷ್ಠಿತ ಎಲ್ಲ ಕಂಪನಿಯ ರೆಫ್ರಿಜಿರೇಟರ್, ಎಸಿ, ವಿವಿಧ ಶ್ರೇಣಿಯ ಎಲ್‌ಇಡಿ ಟಿವಿಗಳು, ವಾಷಿಂಗ್ ಮಷಿನ್‌ಗಳು, ಮೊಬೈಲ್‌ಗಳು, ಮಿಕ್ಸಿ, ಗ್ರೈಂಡರ್ ದೊರೆಯಲಿವೆ. ವಿಜಯನಗರ 2ನೇ ಹಂತ, ಸೂರ್ಯ ಬೇಕರಿ ರಸ್ತೆಯಲ್ಲಿರುವ ಸ್ಯಾಮ್‌ಸಂಗ್ ಸ್ಮಾರ್ಟ್ ಪ್ಲಾಜಾ ಅಂಗಡಿಯಲ್ಲಿ ಸ್ಯಾಮ್‌ಸಂಗ್ ಕಂಪನಿಯ ಎಲ್‌ಇಡಿ ಟಿವಿ, ವಾಷಿಂಗ್‌ಮಷಿನ್, ರೆಫ್ರಿಜಿರೇಟರ್, ಮೊಬೈಲ್, ಎಸಿ ಮತ್ತು ಮೈಕ್ರೊವೇವ್ ಒವನ್ಸ್ ಸೇರಿದಂತೆ ಗೃಹೋಪಯೋಗಿ ಬಳಕೆಗೆ ಬೇಕಾಗುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳು ಖರೀದಿಗೆ ಲಭ್ಯ ಇವೆ.