ಬಸವಕಲ್ಯಾಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವವನ್ನು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಉದ್ಘಾಟಿಸಿದರು. ನಗರ ಸಭೆ ಅಧ್ಯಕ್ಷ ಎಂಡಿ. ಸಗೀರೋದ್ದಿನ್, ಸಮಾಜ ಕಲ್ಯಾಣ ಇಲಾಖೆ ಎಡಿ ದಿಲೀಪಕುಮಾರ ಉತ್ತಮ, ಇಒ ರಮೇಶ ಸುಲ್ಫಿ, ಪೌರಾಯುಕ್ತ ರಾಜು.ಡಿ. ಬಣಕಾರ, ಸಿಪಿಐ ಅಲಿಸಾಬ್, ಸಿಡಿಪಿಒ ಗೌತಮ ಕಾಂಬಳೆ, ಅರ್ಜುನ ಕನಕ, ಜ್ಯೋಷಿಷಕುಮಾರ ಜೋಶಿ, ಡಾ.ರವೀಂದ್ರನಾಥ, ಸಂಜುಕುಮಾರ ಕಾಂಗೆ, ಅನೀಲಕುಮಾರ ಚಾಂದೆ ಇದ್ದರು. 
ಜಿಲ್ಲೆ

ಡಾ.ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಜ್ಞಾನಿ

ರಾಜು ಯಮಕನಮರಡಿ

ಬಸವಕಲ್ಯಾಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವ ಕಂಡ ಶ್ರೇಷ್ಠ ಜ್ಞಾನಿ, ಶ್ರೇಷ್ಠ ರಾಜಕೀಯ ಮುತ್ಸದಿ ಎಂದು ಬೆಂಗಳೂರಿನ ಜೆಇಎಸ್ ಕೋಚಿಂಗ್ ಸೆಂಟರ್‌ನ ಪ್ರಾಧ್ಯಾಪಕ ಜ್ಯೋಷಿಷಕುಮಾರ ಜೋಶಿ ಹೇಳಿದರು.

ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಾ.ಅಂಬೇಡ್ಕರ್ ಅವರ ಜೀವನ, ಸಾಧನೆ, ಹೋರಾಟ, ಸಂದೇಶ, ಆಶಯ ಕುರಿತು ವಿಶ್ಲೇಷಣಾತ್ಮವಾಗಿ ಉಪನ್ಯಾಸ ಮಂಡಿಸಿದರು.

ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ನಗರ ಸಭೆ ಅಧ್ಯಕ್ಷ ಎಂ.ಡಿ.ಸಗೀರೋದ್ದಿನ್, ತಾಪಂ ಇಒ ರಮೇಶ ಸುಲ್ಫಿ, ಪೌರಾಯುಕ್ತ ರಾಜು.ಡಿ. ಬಣಕಾರ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-೧ ಎಡಿ ದಿಲೀಪಕುಮಾರ ಉತ್ತಮ, ಸಿಪಿಐ ಅಲಿಸಾಬ್, ಗ್ರೇಡ್-೨ ತಹಸೀಲ್ದಾರ್ ರಮೇಶಬಾಬು, ಬೀದರ್ ವಿವಿ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಶಿರಸ್ತೇದಾರ್ ಅನೀಲಕುಮಾರ ಚಾಂದೆ ಇದ್ದರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಿರೂಪಣೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕೋಟೆಯಿಂದ ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಬಿಕೆಡಿಬಿ ಕಲ್ಯಾಣ ಮಂಟಪದವರೆಗೆ ಅಲಂಕೃತ ವಾಹನದಲ್ಲಿ ಡಾ.ಅಂಬೇಡ್ಕರ್ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಮಾಜಿ ಎಂಎಲ್ಸಿ ವಿಜಯಸಿಂಗ್, ನಗರಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ತಹಸೀಲ್ದಾರ ಡಾ.ದತ್ತಾತ್ರೇಯ ಗಾದಾ, ಮುಖಂಡರಾದ ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ವಾಮನ್ ಮೈಸಲಗೆ, ಮನೋಹರ ಮೈಸೆ, ಸುರೇಶ ಮೋರೆ, ಯುವರಾಜ ಭೆಂಡೆ, ರವೀಂದ್ರ ಬೋರೋಳೆ, ಶಹಜಹಾನ್ ತನ್ವೀರ್ ಅಹ್ಮದ್, ಮಹಾದೇವ ಗಾಯಕವಾಡ, ಡಾ.ಖದೀರೋದ್ದಿನ್, ಶಂಕರ ಫುಲೆ, ಮನೋಜ ಮುಡಬಿಕರ್, ಸಿಕಂದರ ಶಿಂಧೆ, ಸಂದೀಪ ಮುಕಿಂದೆ, ಚಂದ್ರಕಾಂತ ಮೇತ್ರೆ ಇತರರಿದ್ದರು.