ಮಾರುತಿ ಬುಕನಟ್ಟಿಗೆ ಡಾ.ಪುನಿತ್ ರಾಜಕುಮಾರ ರಾಜ್ಯ ಪ್ರಶಸ್ತಿ
ವಿಜಯವಾಣಿ ಸುದ್ದಿಜಾಲ
ಚಿಕ್ಕೋಡಿ: ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಸೋಶಿಯಲ್ ವೇಲ್ವೆರ್ ಸೊಸೈಯಟಿ ಹಾಗೂ ಗೌರಮ್ಮ ಬೂಟಾಳೆ ಶಿಕ್ಷಣ ಸಂಸ್ಥೆ ಇವರ ಸಂಯಕ್ತ ಆಶ್ರಯದಲ್ಲಿ ಈಚೆಗೆ ಅಥಣಿ ಪಟ್ಟಣದ ಎಸ್‌ಎಸ್‌ಎಮ್ ಕಾಲೇಜು ಆವರಣದಲ್ಲಿ ನಡೆದ ಗಡಿನಾಡು ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಸಾರಿಗೆ ಇಲಾಖೆ ನೌಕರ ಮಾರುತಿ ಬುಕನಟ್ಟಿ ಅವರಿಗೆ ಡಾ.ಪುನಿತ್ ರಾಜಕುಮಾರ ಸದ್ಭಾವನಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೂಲತಃ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ನಿವಾಸಿಯಾದ ಮಾರುತಿ ಬುಕನಟ್ಟಿ, ರಾಜ್ಯ ಸಾರಿಗೆ ಬಸ್ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಸಮಾಜ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಸಮಾರಂಭದಲ್ಲಿ ಕಾಡಯ್ಯ ಮಹಾಸ್ವಾಮಿಗಳು,ಪಡಸಲಗಿ ಶಶಿಕಾಂತ ಗುರುಗಳು,ಸುರೇಶ ವಾಥ ಮೋಡೆ, ರೇಖಾ ಪಾಟೀಲ,ವೀಣಾ ಕಿಡದಾಳ, ಶಾಮರಾವ್ ಪೂಜಾರಿ.ರಾವಸಾಬ್ ಐಹೊಳೆ, ಹಣಮಂತ ಅರ್ದಾಪುರ, ದಶರಥ ನಾಯಿಕ, ಕುಮಾರ ಗಸ್ತಿ. ರತನ ಹಿರಟ್ಟಿ, ಆಕಾಶ ಕೋಳಿ, ಅಜೀತ ಬೆಳ್ಳಂಕಿ, ಸ್ವಾತಿ ಕಿಡದಾಳ, ಕಲಾವತಿ ಕಿತ್ತೂರು ಇತರರಿದ್ದರು.