ಚಿಕ್ಕೋಡಿ: ಇಲ್ಲಿನ ಮಹಾವೀರ ನಗರ(ದಕ್ಷಿಣ)ದಲ್ಲಿ ನಿರ್ಮಾಣವಾದ ಶೇಗಾಂವ ಶ್ರೀ ಗಜಾನನ ಮಹಾರಾಜರ ಮಂದಿರ ಲೋಕಾರ್ಪಣೆ, ವಾಸ್ತು-ಶಾಂತಿ, ಕಳಸಾರೋಹಣ, ಹೋಮ-ಹವನ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ೆ.19 ಮತ್ತು 20ರಂದು ಹಮ್ಮಿಕೊಳ್ಳಲಾಗಿದೆ.
.19ರಂದು ಬೆಳಗ್ಗೆ 7 ಗಂಟೆಗೆ ಮಂದಿರದ ವಾಸ್ತುಶಾಂತಿ, ಹೋಮ-ಹವನ, 8 ಗಂಟೆಗೆ ಗಜಾನನ ಮಹಾರಾಜರ ಮೂರ್ತಿ, ಪಾದುಕೆ ಹಾಗೂ ಕಳಸದ ಮೆರವಣಿಗೆ, ರಾತ್ರಿ 6ರಿಂದ ಮಹಿಳಾ ಮಂಡಳ ವತಿಯಿಂದ ಭಜನಾ ಕಾರ್ಯಕ್ರಮ, ೆ.20ರಂದು ಉತ್ಸವ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚಣೆ, ಮಹಾಪೂಜೆ, ಬೆಳಗ್ಗೆ 9 ಗಂಟೆಗೆ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿಗಳಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, 11 ಗಂಟೆಗೆ ದಾನಿಗಳ ಸತ್ಕಾರ ಕಾರ್ಯಕ್ರಮ, 12 ಗಂಟೆಗೆ ಮಹಾಪ್ರಸಾದ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮಹಾಂತೇಶ ಬೆನ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.