ಜಿಲ್ಲೆ

ಅ.26ಕ್ಕೆ ಚಳಗೇರಾ ಜಾತ್ರೆ

ರುದ್ರಪ್ಪ ವಾಲಿ

ಕುಷ್ಟಗಿ: ತಾಲೂಕಿನ ಚಳಗೇರಾ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೆಯ ದಶಮಾನೋತ್ಸವದ ಧರ್ಮಸಭೆ ಹಾಗೂ ಧರ್ಮ ಜನಜಾಗೃತಿ ಅಭಿಯಾನದ ಮುಕ್ತಾಯ ಕಾರ್ಯಕ್ರಮದ ನಿಮಿತ್ತ ಅ.26ರಂದು ಗ್ರಾಮದ ರುದ್ರಮುನಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಜಾತ್ರಾ ಮಹೋತ್ಸವ ಜರುಗಲಿದೆ.

ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಬೆಳಗ್ಗೆ ಮೂಲ ಕರ್ತೃ ರುದ್ರಮುನಿ ಶಿವಾಚಾರ್ಯ ಹಾಗೂ ವಿರೂಪಾಕ್ಷಲಿಂಗ ಶಿವಾಚಾರ್ಯರ ಗದ್ದುಗೆಗೆ, ವೀರಭದ್ರೇಶ್ವರ ಮತ್ತು ಭದ್ರಕಾಳಿ ಮೂರ್ತಿಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಯ್ಯಚಾರ ಲಿಂಗದೀಕ್ಷೆ, ಪೂಜ್ಯರ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ನಂತರ ಧರ್ಮಸಭೆ ಜರುಗಲಿದೆ ಎಂದು ಶ್ರೀ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.