ಜಿಲ್ಲೆ

26.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಮೈಸೂರು: ನಗರದ ಗೋಕುಲಂನಲ್ಲಿ ಮನೆಯೊಂದರ ಬಾಗಿಲು ಮುರಿದು ಕಳ್ಳರು 1.5 ಲಕ್ಷ ರೂ. ನಗದು, 26.52 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮನೆ ಮಾಲೀಕ ಎಸ್.ಯೋಗೀಶ್ ಕುಟುಂಬದವರೊಡನೆ ಊರಿಗೆ ತೆರಳಿದ್ದರು. ಮರುದಿನ ಮನೆಗೆ ಬಂದಾಗ ಬಾಗಿಲು ಮುರಿದಿರುವುದು ಕಂಡುಬಂತು.

ಮನೆಯ ಕೋಣೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ ಎಂದು ಅವರು ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.