ಜಿಲ್ಲೆ

25ರಂದು ಸಾಂಸ್ಕೃತಿಕ ಉತ್ಸವ

ಚಿತ್ರದುರ್ಗ: ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೊಳಕಾಲ್ಮೂರು ತಾಲೂಕು ರಾಂಪುರದ ನ.25 ರಂದು ಎಸ್‌ಜಿಎಂ ವಿದ್ಯಾಪೀಠ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ.
ಗ್ರಾಮದಲ್ಲಿ 32 ವರ್ಷಗಳ ನಂತರ ಗಡಿ ಉತ್ಸವ ಜರುಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಗ್ರಾಮದ ಎಸ್‌ಪಿಎಸ್‌ಆರ್ ಸಂಸ್ಥೆ ಸ್ಥಳದಿಂದ ವಿದ್ಯಾಪೀ ಠದ ಶಾಲೆಯವರೆಗೆ ಶ್ರೀ ಭುವನೇಶ್ವರಿ ದೇವಿ ಮೆರವಣಿಗೆ ಜರುಗಲಿದೆ. ಡೊಳ್ಳು, ಕಹಳೆ, ಸೋಬಾನೆ ಪದ, ಕೋಲಾಟ, ಟ್ರಾಷ್ ವಾದ್ಯಗಳು ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಯಲ್ಲಿರುತ್ತವೆ.
ಸಭಾ ಕಾರ‌್ಯಕ್ರಮದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ, ಗ್ರಾಪಂ ಅಧ್ಯಕ್ಷೆ ಟಿ.ನಾಗವೇಣಿ ರವಿಶಂಕರ್, ತಹಸೀಲ್ದಾರ್ ಎಂ.ವಿ.ರೂಪಾ, ಬಿಇಒ ಇ.ನಿರ್ಮಲಾದೇವಿ ಸೇರಿದಂತೆ ನಾನಾ ಜನಪ್ರತಿನಿಧಿಗಳು,ಅಧಿಕಾರಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.