ಚಿತ್ರದುರ್ಗ:ಕರ್ನಾಟಕ ಆದಿಜಾಂಬವ ಸಾಂಸ್ಕೃತಿಕ ಸಮಿತಿ,ಬೆಂಗಳೂರಿನ ಗಾಂಧಿಭವನದಲ್ಲಿ ಆ.25ರಂದು ಬೆಳಗ್ಗೆ 10.30ಕ್ಕೆ ಮೇರು ಕವಿ ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ‌್ಯಕ್ರಮವನ್ನು ಏರ್ಪಡಿಸಿದೆ ಎಂದು ಸಮಿತಿ ಅಧ್ಯಕ್ಷ,ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ‌್ಯಕ್ರಮ ಉದ್ಘಾಟಿಸಲಿದ್ದು,ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ,ಪತ್ರಕರ್ತ ರವೀಂದ್ರಭಟ್,ಸಾಹಿತಿ ಕೆ.ಮರುಳಸಿದ್ದಪ್ಪ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಚಿಂತಕರಾದ ಮಾವಳ್ಳಿ ಶಂಕರ್,ಡಿ.ಜಿ.ಸಾಗರ್,ಪ್ರೊ.ಜಾಫೆಟ್,ಡಾ.ನಿರಂಜನಾರಾಧ್ಯ,ಇಂದಿರಾ ಕೃಷ್ಣಪ್ಪ,ಡಿ.ಶಿವಶಂಕರ್,ಡಾ.ಮಾನಸಸಿದ್ದ ಲಿಂಗಯ್ಯ ಉಪಸ್ಥಿತರಿರುತ್ತಾರೆ. ಸಾಹಿತ್ಯ ಅಸಕ್ತರು,ಸಿದ್ದಲಿಂಗಯ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಬೇ ಕೆಂದು ಮಾಜಿ ಸಚಿವ ಎಚ್.ಆಂಜನೇಯ ಕೋರಿದ್ದಾರೆ.
(ಆಂಜನೇಯ ಮಗ್‌ಶಾಟ್)