ಜಿಲ್ಲೆ

ಆ.1ರಂದು ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ 25ನೇ ವಾರ್ಷಿಕೋತ್ಸವ

ಮೈಸೂರು: ನಗರದಲ್ಲಿ ಆಗಸ್ಟ್ 1ರಂದು ಆಯೋಜಿಸಿರುವ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ 25ನೇ ವಾರ್ಷಿಕೋತ್ಸವದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕುವೆಂಪುನಗರದಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕುವೆಂಪುನಗರದಲ್ಲಿರುವ ಕಾಳಮ್ಮ ಬಂದಂತಮ್ಮ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 1ರಂದು ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದ 25ನೇ ವಾರ್ಷಿಕೋತ್ಸದ ಸಮಾರಂಭ ಆಯೋಜಿಸಲಾಗಿದೆ. ಎಲ್ಲರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕೋರಿದರು.

25 ವರ್ಷದಿಂದ ಮಹಿಳೆಯರು ಸೇರಿ ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತಾ ಬಂದಿರುವುದೇ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಸಾಕ್ಷಿ ಎಂದು ಶ್ಲಾಘಿಸಿದರು.

ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾಗೌಡ ಮಾತನಾಡಿ, ಆಗಸ್ಟ್ 1ರಂದು ಆಯೋಜಿಸಿರುವ ಬೆಳ್ಳಿ ಹಬ್ಬಕ್ಕೆ ಎಲ್ಲ ಬಂಧುಗಳು, ಹಿತೈಷಿಗಳು ಆಗಮಿಸಿ ಸಮಾರಂಭವನ್ನು ಯಶಸ್ವಿಯಾಗುವಂತೆ ಸಹಕರಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಹಾಗೂ ಸಂಘದ ಸದಸ್ಯರನ್ನು ಸನ್ಮಾನಿಸಲಾಗುವುದು. ಮುಂದೆ ಸಂಘಟನೆ ಇನ್ನಷ್ಟು ಬಲಗೊಳಿಸಲು ಎಲ್ಲರು ಬೆಂಬಲ ನೀಡಬೇಕು ಎಂದರು.

ಪದಾಧಿಕಾರಿಗಳಾದ ರಾಜೇಶ್ವರಿ ನಾಗರಾಜ, ಅನಿತಾಸುನಂದಾ, ವಸಂತಾ, ಸುವರ್ಣ ಗಣೇಶ, ವಿಮಲಾ, ರತ್ನಾ, ರುಕ್ಮಿಣಿ ರಮೇಶ್ ಇತರರು ಇದ್ದರು.