ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಲಾಯಪ್ಪಗೌಡ ನಾಯ್ಕರ (ಭಾರತೀಯ ಸೇನೆ), ಬಸಪ್ಪ ಗಿರಿಗಾವಿ, ಈಶ್ವರ ಕರಬಸವನವರ (ಕೃಷಿ), ಚಂದ್ರಲಿಂಗಪ್ಪ ಬಸರಕೋಡ (ವೀರಗಾಸೆ), ಬಸವರಾಜ ದಾವಣಗೆರೆ (ಶಿಕ್ಷಣ, ಸಮಾಜಸೇವೆ), ಮೌನೇಶ ಬಡಿಗೇರ (ಶಿಲ್ಪಕಲೆ), ಪರಶುರಾಮ ಬಿಸನಾಳ, ಡಾ.ವಿಜಯಮಹಾಂತೇಶ ಮಲಗಿಹಾಳ (ಸಮಾಜ ಸೇವೆ), ಮಲ್ಲಿಕಾರ್ಜುನ ಯರಗೇರಿ (ಜನಪದ ಸಂಗೀತ), ಭರತ ಮಧರಖಂಡಿ, ರೂಪಶ್ರೀ ಕಲಾದಗಿ (ಅಂಗಾಂಗದಾನ), ಡಾ.ಬಸವರಾಜ ಗವಿಮಠ (ಲಲಿತಕಲಾ ಸೇವೆ), ವೈಷ್ಣವಿ ಬಾದವಾಡಗಿ, ಪೂರ್ವಿ ಸಿದ್ದವಗೋಳ, ರಾಮಕೃಷ್ಣ ದಾಸರ (ಕ್ರೀಡೆ), ವಿಲಾಸ್ ಯಣ್ಣಿ (ಸಂಗೀತ), ಹನುಮಪ್ಪ ಕೆಸರಪೆಂಟಿ, ನಿಂಗಪ್ಪ ಕಲ್ಲಪ್ಪ (ಭಜನೆ), ರಾಘವೇಂದ್ರ ನೀಲನ್ನವರ (ಯೋಗ), ಸಲೀಮ ಕೊಪ್ಪದ, ವಿಶ್ವಜ ಕಾಡದೇವರ, ಲಿಂಗರಾಜ ಚಿನಿವಾಲರ (ಪತ್ರಕರ್ತರು), ತಿಪ್ಪಣ್ಣ ಚಲವಾದಿ (ಸಂಪಾದಕರು).
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.