ಹುಲಸೂರಿನಲ್ಲಿ ಶ್ರೀ ಬಸವಕುಮಾರ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಗೆ ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಧರ್ಮೇಂದ್ರ ಭೋಸ್ಲೆ ಶುಕ್ರವಾರ ಚಾಲನೆ ನೀಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಹುಲಸೂರಿನಲ್ಲಿ ವಚನ ಸಾಹಿತ್ಯದ ಮೆರವಣಿಗೆ ವೈಭವ

ರಾಜು ಯಮಕನಮರಡಿ

ಹುಲಸೂರು: ಪಟ್ಟಣದ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಬಸವಕುಮಾರ ಶಿವಯೋಗಿಗಳ ೪೯ನೇ ಪುಣ್ಯ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಶುಕ್ರವಾರ ವೈಭವದ ಮೆರವಣಿಗೆ ಜರುಗಿತು.

ಗುರುಬಸವೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶರಣ ಸಾಹಿತ್ಯ ಚಿಂತಕ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಧರ್ಮೇಂದ್ರ ಬೋಸ್ಲೆ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಹಸಿರು ತೋರಣ, ಹೂಗಳಿಂದ ಸಿಂಗರಿಸಿದ್ದ ತೆರೆದ ವಾಹನದಲ್ಲಿ ವಚನ ಸಾಹಿತ್ಯ, ಮಹಾತ್ಮ ಬಸವೇಶ್ವರ ಮೂರ್ತಿ ಹಾಗೂ ಬಸವಕುಮಾರ ಶಿವಯೋಗಿಗಳ ಭಾವಚಿತ್ರದೊಂದಿಗೆ ಸಂಸ್ಥೆ ಆವರಣದಿಂದ ಶುರುವಾದ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆ ಮೂಲಕ ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠ, ಗಾಂಧಿ ವೃತ್ತ, ಲಕ್ಷ್ಮೀ ಚೌಕ್ ಮೂಲಕ ಅಲ್ಲಮಪ್ರಭು ಶೂನ್ಯ ಪೀಠ ಅನುಭವ ಮಂಟಪದಿಂದ ಪುನಃ ಶ್ರೀಮಠಕ್ಕೆ ತಲುಪಿತು. ಶರಣರ ವಚನಗಳ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು. ಶರಣೆಯರ ನೃತ್ಯ, ವಿದ್ಯಾರ್ಥಿಗಳ ಲೇಜಿಮ್, ಡೊಳ್ಳು ಕುಣಿತ, ಕುದುರೆ ಕುಣಿತ ನೋಡುಗರ ಗಮನಸೆಳೆಯಿತು.

ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಗುರುಮಠಕಲ್​, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗ್ರಾಪಂ ಉಪಾಧ್ಯಕ್ಷೆ ಮೀರಾಬಾಯಿ ರಣಜೀತ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಾಜಿ ಸದಸ್ಯ ಸುಧೀರ ಕಾಡಾದಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ, ಪ್ರಮುಖರಾದ ಗೋವಿಂದರಾವ ಸೋಮವಂಶಿ, ಬಾಬುರಾವ ಗೌಂಡಗಾವೆ, ಎಂ.ಜಿ. ರಾಜೋಳೆ, ಶಿವಕುಮಾರ ಕಾಡಾದಿ, ಕಾಶೀನಾಥ ಪಾರಶೆಟ್ಟಿ, ಬಾಲಾಜಿ ಆದೆಪ್ಪ, ವಿವೇಕ ಚಳಕಾಪುರೆ, ನಾಗರಾಜ ಹಾವಣ್ಣ, ಆಕಾಶ ಖಂಡಾಳೆ, ಪ್ರವೀಣ ಕಾಡಾದಿ, ರಮೇಶ ಭೋಪಳೆ, ಬಸವರಾಜ ಹಾರಕೂಡೆ, ನಾಗನಾಥ ಗೌಂಡಗಾವೆ, ಬಸವರಾಜ ಡೋಣಗಾಂವಕರ, ರೇಖಾ ಕಾಡಾದಿ, ಚಂದ್ರಕಾಂತ ದೇಟ್ನೆ, ಸೋಮನಾಥ ನಂದಗೆ ಇತರರಿದ್ದರು.