ಜಿಲ್ಲೆ

ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಮುರುಘಾ ಮಠದ ಮುನ್ನುಡಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಮುರುಘಾ ಮಠದ 35 ವರ್ಷಗಳ ಹಿಂದೆಯೇ ಮುನ್ನುಡಿ ಬರೆದಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಈಗ ನಾಡಿನ ಎಲ್ಲಡೆ ಮನ್ನಣೆ ದೊರಕಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ಶ್ರೀ ಮಠದಲ್ಲಿ ಭಾ ನುವಾರ ಆಯೋಜಿಸಿದ್ದ 35ನೇ ವರ್ಷದ ಒಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಶ್ರೀಗಳು,ಶುಭ,ಅ ಶುಭ,ಅಮವಾಸ್ಯೆ,ಹುಣ್ಣಿಮೆ ಇತ್ಯಾದಿಗಳನ್ನು ಲೆಕ್ಕಿಸದೆ ಕಳೆದ 34ವರ್ಷಗಳಿಂದ ಕಲ್ಯಾಣ ಮಹೋತ್ಸವ ನಡೆದುಕೊಂಡು ಬಂದಿದ್ದು,ಒಂ ದು ಜೋಡಿ ಇದ್ದರೂ 100 ಜೋಡಿ ಇದ್ದರೂ ಒಂದೇ ರೀತಿಯ ಸಂಭ್ರಮ ಶ್ರೀಮಠದಲ್ಲಿರುತ್ತದೆ ಎಂದರು.

ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ಪುಷ್ಯಮಾಸದಲ್ಲಿ ಮದುವೆಗಳು ಕಡಿಮೆ. ಶ್ರೀಮಠದಲ್ಲೇ ಮದುವೆಯಾಗಬೇಕೆಂಬ ಹಂಬಲದೊಂದಿಗೆ ಧಾರವಾಡ ನವಜೋಡಿಗೆ ಶುಭವಾಗಲಿ. ಹೊಸ ವರ್ಷಾಚರಣೆ ಒಂದು ದಿನಕ್ಕೆ ಸೀಮಿತ ವಾಗಬಾರದು. ಪ್ರತಿದಿನ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಸಂಸಾರ ಜೀವನ ಯಶಸ್ಸಿಗೆ ದಂಪತಿಗಳಲ್ಲಿ ಪರಸ್ಪರ ಪ್ರೀತಿ,ನಂಬಿಕೆ ಮತ್ತು ಗೌರವ ಇರಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹೆರಿಗೆ ಮತ್ತು ಸ್ತ್ರೀರೋಗ ವೈದ್ಯೆ ಡಾ.ಬಿ.ವೈ.ರೂಪಶ್ರೀ ಮಾತನಾಡಿದರು. ಜಿಲ್ಲಾ ಶರಣ ಸಾ ಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್,ಫೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥಿಸಿದರು.ಡಾ.ಎನ್.ಜೆ.ಶಿವಕುಮಾರ್ ಸ್ವಾಗತಿಸಿದರು. ಲಂಕೇಶ್ ದೇವರು ನಿರೂಪಿಸಿದರು. ಟಿ.ಪಿ.ಜ್ಞಾನಮೂರ್ತಿ ವಂದಿಸಿದರು.