ಬಸವಕಲ್ಯಾಣ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಅವಮಾನಕರ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬಸವಕಲ್ಯಾಣ ಬಂದ್ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಯುದ್ದಕ್ಕೂ ಷಾ ವಿರುದ್ಧ ಘೋಷಣೆಗಳು ಮೊಳಗಿದವು. ವೃತ್ತದ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಫಲವಾಗಿಯೇ ಅಮಿತ್ ಷಾ ಸಚಿವರಾಗಿದ್ದಾರೆ. ಅಂಥವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಷಾ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಸಂಘಟನೆಗಳ ಪ್ರಮುಖರಾದ ಮನೋಹರ ಮೈಸೆ, ಗೌತಮ ಜಾಂತೆ, ಮಹಾದೇವ ಗಾಯಕವಾಡ, ಶಂಕರ ಫುಲೆ, ಪಿಂಟು ಕಾಂಬಳೆ, ಸವಿತಾ ಕಾಂಬಳೆ, ರಾಜೇಶ್ವರಿ ವರ್ಧನ್, ಸಂದೀಪ ಮುಕಿಂದೆ, ಇಕ್ರಾಮೋದ್ದಿನ್ ಖಾದಿವಾಲೆ, ಬಾಬಾ ಚೌಧರಿ, ಸೈಯದ್ ಬಾಷಾ ಇತರರು ಮಾತನಾಡಿ, ಷಾ ವಿರುದ್ಧ ಕಿಡಿಕಾರಿದರು.
ಮುಖಂಡರಾದ ಬಾಬು ಹೊನ್ನಾನಾಯಕ, ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ನರಸಿಂಗರಾವ ಕಾಂಬಳೆ, ನೀಲಕಂಠ ರಾಠೋಡ, ವಾಮನ್ ಮೈಸಲಗೆ, ದಿಲೀಪ ಸಿಂಧೆ, ಯುವರಾಜ ಭೆಂಡೆ, ವಿಜಯಕುಮಾರ ಡಾಂಗೆ, ಚೇತನ ಕಾಡೆ, ತಾಹರ್‌ಭಾಯಿ ಔರಂಗಾಬಾದ, ಸಿಕಂದರ ಸಿಂಧೆ, ಶ್ರೀಕಾಂತ ಕಾಂಬಳೆ, ಜೈಭೀಮ ಕೊಳೆ, ಆಕಾಶ ಖಂಡಾಳೆ, ಗಫಾರ್ ಪೇಶಮಾಮ್, ದಿಗಂಬರ ಜಲ್ದೆ, ಅಶೋಕ ಢಗಳೆ, ಮಾರುತಿ ಫುಲೆ, ಸಾಗರ, ಪ್ರಫುಲ್ ಗಾಯಕವಾಡ. ದತ್ತು ಭೆಂಡೆ, ಅಭಿಜೀತ್ ಸೂರ್ಯವಂಶಿ, ವಿಲಾಸ ನಟೇಕರ್, ಯಶವಂತ ತಳೇಕರ್, ರಾಜು ಸೂರ್ಯವಂಶಿ, ವಿನೋದ ಲಾಖೆ, ಮಿಲಿಂದ್ ಸಾಗರ್, ನಿತಿನ್ ಡಾಂಗೆ, ಚಂದ್ರಕಾಂತ ವಾಘ್ಮಾರೆ ಇತರರು ಪಾಲ್ಗೊಂಡಿದ್ದರು.
ರಾಷ್ಟçಪತಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಡಿ ನೀಡಿದ ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಲಾಯಿತು. ತಹಸೀಲ್ದಾರ್ ದತ್ತಾತ್ರೇಯ ಗಾದಾ, ಸಿಪಿಐಗಳಾದ ಅಲಿಸಾಬ್, ಕೃಷ್ಣಕುಮಾರ ಪಾಟೀಲ್, ಪಿಎಸ್‌ಐ ಅಂಬರೀಶ್ ವಾಗ್ಮೋಡೆ ಇದ್ದರು.