ಚಿತ್ರದುರ್ಗ:ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವ ನೊಂದ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಪರಿಹಾರ ಕೊಡ ಬೇಕೆಂದು ಆಮ್‌ಆದ್ಮಿ ಪಕ್ಷದ ರಾಜ್ಯಪ್ರಧಾನ ಕಾರ‌್ಯದರ್ಶಿ ಜಗದೀಶ್ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ. ಕವಾಡಿಗರಹಟ್ಟಿಯಲ್ಲಿ ಶನಿವಾರ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು,ಪ್ರಕರಣದ ಹಿಂದೆ ಯಾರದೂ ಕೈವಾಡವಿದೆ.
ಕಾಲರವಾಗಿದ್ದರೆ ಎಲ್ಲೆಡೆ ಹಬ್ಬ ಬೇಕಿತ್ತು,ಕಾಲನಿಯಲ್ಲಿ ಮಾತ್ರ ದುರ್ಘಟನೆ ನಡೆದಿದೆ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ ಬೇಕು. ಇಲ್ಲಿ ವಾಸವಿರುವಂಥವರು ಬಡವರು,ಆಶ್ವಾಸನೆಯಿಂದ ಏನೂ ಆಗದು,ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಸಿಎಂಗೆ ಮನವಿ ಮಾಡುವುದಾಗಿ ಹೇಳಿದರು.
(ಸಿಟಿಡಿ 8 ಆಪ್ ಜಗದೀಶ್)