ಮೈಸೂರು: ಸಿರಿಗನ್ನಡ ವೇದಿಕೆ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೆ.25ರಂದು ಎಸ್‌ಪಿಬಿ ಅವರ ಗೀತೆಗಳ ಸಂಗೀತ ರಸಸಂಜೆ ಆಯೋಜಿಸಲಾಗಿದೆ.
ಲಕ್ಷ್ಮೀಪುರಂ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 4.30ಕ್ಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಉದ್ಘಾಟಿಸಲಿದ್ದಾರೆ. ಸಂಸ್ಕೃತಿ ಪಾಲಕರಾದ ಕೆ.ರಘುರಾಂ ವಾಜಪೇಯಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಇತರರು ಭಾಗವಹಿಸುವರು ಎಂದು ಗಾಯಕ ವೇದಾಂತ್ ಅತಿಶಯ್ ಜೈನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನೂ ಸೇರಿದಂತೆ ಡಿ.ರಶ್ಮಿ, ಸಿಂಚನಾ, ಚಂದನ್, ಎಸ್.ಕೆ.ಧನುಷ್, ಪ್ರೇರಣಾ ಯಶ್ವಂತ್ ಇತರರು ಹಾಡಲಿದ್ದಾರೆ. ಗಾಯನ ವಿಶ್ವವಿದ್ಯಾಲಯವೇ ಅಗಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ಹಾಡದ ಹಾಡುಗಳಿಲ್ಲ. ಹೀಗಾಗಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 25 ಹಾಡುಗಳನ್ನು ಹಾಡಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
ಆಯೋಜಕರಾದ ಎನ್.ಸಿ.ಮಮತಾ,ಎಂ.ಬಿ.ಸಂತೋಷ್, ಎ. ಹೇಮಗಂಗಾ, ಡಾ.ಸೌಗಂಧಿಕಾ ಜೋಯಿಸ್ ಇದ್ದರು.