ಜಿಲ್ಲೆ

ಅಪ್ರಾಪ್ತೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ಆರೋಪಿಗೆ 25 ವರ್ಷ ಜೈಲು ಶಿಕ್ಷೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಅಪ್ರಾಪ್ತೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ ಆರೋಪ ಸಾಭಿತಾದ ಹಿನ್ನೆಲೆ ಅಪರಾಧಿ ಮೌಲಾಸಾಬ ದೊಡ್ಡಮನಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 50 ವಾವಿರ ರೂ. ದಂಡ ವಿಧಿಸಿ ಗದಗ ಜಿಲ್ಲಾ ನ್ಯಾಯಾಯಲ ಆದೇಶ ನೀಡಿದೆ.
ಏನಿದು ಪ್ರಕರಣ?
ಸವದತ್ತಿ ತಾಲೂಕಿನ ತೆರೆದಕೊಪ್ಪ ಗ್ರಾಮದ ಮೌಲಾಸಾಬ ಎಂಬ ವ್ಯಕ್ತಿಯು ಬಾಲಕಿಯೋರ್ವಳನ್ನು ಒತ್ತಾಯಪೂರ್ವಕ ಬೈಕ್​ ಮೇಲೆ ಕೂರಿಸಿಕೊಂಡು ನರಗುಂದ - ಮುನವಳ್ಳಿ ಕ್ರಾಸ್​ ಬಳಿಯ ಒಂಟಿ ಮನೆಗೆ ಕರೆದುಕೊಂಡು ಹೋಗಿ, ಚಾಕು ತೋರಿಸಿ, ಪ್ರಜ್ಞೆ ತಪ್ಪುವ ಮಾತ್ರೆ ನೀಡಿ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಬಹಿರಂಗಪಡಿಸಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಪ್ರಕರಣವನ್ನು 2018ರಲ್ಲಿ ನರಗುಂದ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುತ್ತದೆ. ಆರೋಪಿನ್ನು ಪೊಲೀಸರು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿರುತ್ತಾರೆ. ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ, ಅಪರಾಧಿಗೆ 366ಎ ಕಲಂ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 506ರ ಅಡಿಯಲ್ಲಿ 3 ವರ್ಷ ಜೈಲು ಮತ್ತು 3 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆ ಅಡಿ 25 ವರ್ಷ ಜೈಲು ಶಿೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಸೋಮವಾರ ಆದೇಶ ನೀಡಿದೆ.

ಕೋಟ್​:
2018ರಲ್ಲಿ ಅಂದಿನ ಪೊಲೀಸ್​ ಇನ್ಸಪೆಕ್ಟರ್​ ಶ್ರೀನಿವಾಸ ಮೇಟಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 5 ವರ್ಷ ತನಿಖೆಯ ವಿಚಾರಣೆ ನಡೆಸಿದ ನ್ಯಾಯಾಲಯ ವಿವಿಧ ಕಳಂ ಅಡಿಯಲ್ಲಿ ಅಪರಾಧಿಗೆ ಜೈಲು ಶಿಕ್ಷೆ ನೀಡಿದೆ.
- ಅಮರೇಶ ಹಿರೇಮಠ,
ವಿಶೇಷ ಸರ್ಕಾರಿ ಅಭಿಯೋಜಕರು.(ಪೋಕ್ಸೋ)