ಭದ್ರಾವತಿ: ಚಲನಚಿತ್ರ ನಟ ದಿವಂಗತ ಶಂಕರ್‌ನಾಗ್ ಸ್ಮರಣಾರ್ಥವಾಗಿ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಕರ್ನಾಟಕ ಸ್ಟಾರ್ ಸಿಂಗರ್ 2023 ಸೀಜನ್-1 ರಾಜ್ಯಮಟ್ಟದ ಚಲನಚಿತ್ರ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್ ತಿಳಿಸಿದರು. ಸ್ಪರ್ಧೆಯ ಆಡಿಷನ್ ಆ.24ರಂದು ಬೆಳಗ್ಗೆ 9.30ಕ್ಕೆ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್‌ಕ್ಲಬ್‌ನಲ್ಲಿ, ಆ.30ರಂದು ಸೆಮಿೈನಲ್, ಸೆ.6 ಸಂಜೆ 5ಗಂಟೆಗೆ ೈನಲ್ಸ್ ಇದ್ದು ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ಆ.23 ಕಡೆಯ ದಿನ. 18 ವರ್ಷ ಮೇಲ್ಪಟ್ಟವರು ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ೈನಲ್ಸ್‌ನಲ್ಲಿ ತೀರ್ಪುಗಾರರಾಗಿ ಪ್ರಖ್ಯಾತ ಗಾಯಕರಾದ ಗುರುರಾಜ್, ಅಜಯ್ ವಾರಿಯರ್, ಸುರೇಖಾ ಹೆಗಡೆ ಪಾಲ್ಗೊಳ್ಳುವರು. ವಿಜೇತರಿಗೆ ಪ್ರಥಮ ಬಹುಮಾನವಾಗಿ 25,000, ದ್ವಿತೀಯ ಬಹುಮಾನ 15,000, ತೃತೀಯ ಬಹುಮಾನ 10,000 ಹಾಗೂ ಸಮಾಧಾನಕರ ಬಹುಮಾನ 2,000 ಹಾಗೂ ಪಾರಿತೋಷಕ ನೀಡಲಾಗುವುದು ಎಂದರು. ಮಾಹಿತಿಗೆ 9845314172 ಸಂಪರ್ಕಿಸಬಹುದು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಿದಾನಂದ, ಚರಣ್ ಕವಾಡ್, ಬಿ.ಆರ್.ವಿಕ್ರಂ, ಎ.ಪ್ರಶಾಂತ್, ಶಂಕರ್‌ಬಾಬು, ವೈ.ಕೆ.ಹನುಮಂತಯ್ಯ ಇದ್ದರು.