ಮೈಸೂರು: ಕಾನೂನು ಬಾಹಿರಬಾಗಿ ಹಣವನ್ನು ಪಣವಾಗಿಟ್ಟು ಕೇರಂ ಆಟದಲ್ಲಿ ತೊಡಗಿದ್ದ 25 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 24,970 ರೂ. ವಶಪಡೆಸಿಕೊಂಡಿದ್ದಾರೆ.
ಬಡಮಕಾನ್ ರಸ್ತೆಯಲ್ಲಿರುವ ಎ.ಪಿ.ಜೆ ಅಬ್ದುಲ್ ಕಲಾಂ ಯೂತ್ ಕೇರಂ ಕ್ಲಬ್‌ನಲ್ಲಿ ಮನರಂಜನೆ ನೆಪದಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೇರಂ ಆಟವನ್ನು ಜೂಜಾಟದಂತೆ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.