ಜಿಲ್ಲೆ

ಕೆ.ಜಿ. ಗಾಂಜಾ ದಹನ : ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದ ಮಾದಕವಸ್ತು

ಸೌಮ್ಯ ಆರ್

ಮೂಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ವಿಲೇವಾರಿ ಪ್ರಕ್ರಿಯೆ ಕೋಲ್ನಾಡು ಬಳಿ ಗುರುವಾರ ಬೆಳಗ್ಗೆ ನಡೆಯಿತು.

ವಿವಿಧ ಪ್ರಕರಣಗಳಲ್ಲಿ ವಶಪಡಿಕೊಂಡ 11.91 ಲಕ್ಷ ರೂ. ಮೌಲ್ಯದ 25.433 ಕೆ.ಜಿ ಗಾಂಜಾ, 3.15 ಲಕ್ಷ ರೂ. ಮೌಲ್ಯದ 89 ಗ್ರಾಂ ಎಂಡಿಎಂಎಗಳನ್ನು ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಭೀಮಾ ಶಂಕರ್, ಪಡುಪಣಂಬೂರು ಗ್ರಾಪಂ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಸಮಕ್ಷಮದಲ್ಲಿ ಸುಟ್ಟು ವಿಲೇವಾರಿ ಮಾಡಲಾಯಿತು.

ಮಂಗಳೂರು ಡಿಸಿಪಿ ರವಿಶಂಕರ್, ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ, ಕೊಣಾಜೆ ಪೊಲೀಸ್ ಠಾಣೆ ಎಸ್‌ಐ ಪುನೀತ್ ಗಾಂವ್ಕರ್, ಬಜ್ಪೆ ಠಾಣೆ ಎಸ್‌ಐ ರೇವಣಸಿದ್ದಪ್ಪ, ಉಳ್ಳಾಲ ಠಾಣೆ ಎಸ್‌ಐ ಸಿದ್ದಪ್ಪ, ಮಂಗಳೂರು ಉತ್ತರ ಪೊಲೀಸ್ ಠಾಣೆ ಎಸ್‌ಐ ಫೈಜುನ್ನಿಸಾ, ಕಂಕನಾಡಿ ಎಸ್‌ಐ ಅನಿತಾ, ಸುರತ್ಕಲ್ ಎಸ್‌ಐ ಶಶಿಧರ್ ಶೆಟ್ಟಿ, ಬರ್ಕೆ ಪೊಲೀಸ್ ಠಾಣೆ ಮೋಹನ್ ಕೊಟ್ಟಾರಿ, ಕಂಪನಿ ಎಂಡಿ ಪ್ರಶಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.