ಜಿಲ್ಲೆ

೨೫ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಮಡಿಕೇರಿ: ಮಡಿಕೇರಿ ಎಂಎಸ್‌ಎಂಇ(ಮಿನಿಸ್ಟ್ರಿ ಆಫ್ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್) ವತಿಯಿಂದ ೨೫ ಅಭ್ಯರ್ಥಿಗಳಿಗೆ ೬ ವಾರಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಶ್ರೀ ಸದ್ಗುರು ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮವನ್ನು ಮಂಗಳೂರು ಎಂಎಸ್‌ಎಂಇನ ಸಹಾಯಕ ನಿರ್ದೇಶಕ ಸುಮನ್.ಎಸ್.ರಾಜ್‌ರವರು ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಹರೀಶ್, ಗಂಗಾದರ್ ನಾಯಕ್, ಲೀಡ್ ಬ್ಯಾಂಕ್ ಮ್ಯಾನೆಜರ್ ಹಾಜರಿದ್ದರು.


ಸದ್ಗುರು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ ಯ ಅಸಿಸ್ಟೆಂಟ್ ಡೈರೆಕ್ಟರ್‌ರಾದ ಸುಮನ್ ರಾಜ್ ಹಾಗೂ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಿ.ಎಸ್.ಡಿ.ಓ ಉಮಾ ಪಾಲ್ಗೊಂಡು ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.