ಜಿಲ್ಲೆ

25 ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ

ರಾಜಣ್ಣ

ಸಾಲಿಗ್ರಾಮ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈಗಾಗಲೇ ಘೋಷಣೆ ಮಾಡಿರುವ 25 ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.


ಭೇರ್ಯ ಸಮೀಪದ ಅರಕೆರೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಜತೆ ಸಂಸದರ ಅನುದಾನ ತಂದು ಹೆಚ್ಚು ಕೆಲಸ ಮಾಡಬೇಕಾಗಿದೆ ಎಂದರು.


ಕೆಪಿಸಿಸಿ ಸದಸ್ಯ ದೊಡ್ಡ ಸ್ವಾಮಿಗೌಡ ಮಾತನಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು, (ವೆಂಕಟರಮಣೆಗೌಡ), ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ, ಕಾಂಗ್ರೆಸ್ ಮುಖಂಡ ಸಿ.ಪಿ.ರಮೇಶ್, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಶಂಕರ್, ಎಂ.ಎಸ್.ಮಹದೇವ್, ಎಂ.ಜೆ.ರಮೇಶ್, ಕ್ಯಾರೆ ನಾಗರಾಜ್, ಕಾಂಗ್ರೆಸ್ ತಾಲೂಕು ವಕ್ತಾರ ಜಾಬೀರ್, ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಸುನಿತಾ ರಮೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ನಿರ್ದೇಶಕಿ ಸರಿತಾ, ಪುರಸಭಾ ಸದಸ್ಯ ಕೋಳಿ ಪ್ರಕಾಶ್, ಮಾಜಿ ಅಧ್ಯಕ್ಷ ನರಸಿಂಹರಾಜು, ಕಾಂಗ್ರೆಸ್ ಮುಖಂಡರಾದ ವೈ.ಎಸ್.ಕುಮಾರ್, ಹೆಬ್ಬಾಳು ನಾಗೇಂದ್ರ, ಎಚ್.ಪಿ.ಗೋಪಾಲ್, ಸಾಲಿಗ್ರಾಮ ಮಂಜು, ಬಿ.ಟಿ.ಮೋಹನ, ಗ್ರಾಪಂ ಸದಸ್ಯ ಮಂಜಪ್ಪ, ಬಿ.ಪಿ.ಪ್ರಕಾಶ್, ಜಿ.ಎ.ಗುಪ್ಪೆ ನಾಗರಾಜ್, ಮುಂಜನಹಳ್ಳಿ ಮಹದೇವನಾಯಕ, ಖಾಲಿದ್ ಪಾಷ, ಸಾಲಿಗ್ರಾಮ ಮೀನುಗಾರರ ಸಂಘ ತಾಲೂಕು ಅಧ್ಯಕ್ಷ ಭೇರ್ಯ ಉದೇಶ್ ನಾಯಕ, ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾ, ರತ್ನಮ್ಮ, ರಾಣಿ ಇತರರಿದ್ದರು.