ಚಿತ್ರದುರ್ಗ: ಕೆಎಂಇಆರ್‌ಸಿಯ 24 ಸಾವಿರ ಕೋಟಿ ರೂ. ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಭಟ್ರಹಳ್ಳಿ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಂಇಆರ್‌ಸಿಗೆ ಅಧ್ಯಕ್ಷರಾಗಲು ಅವಕಾಶ ಇಲ್ಲದಿದ್ದರೂ ಸಿಎಂ ಪ್ರಯತ್ನಿಸುತ್ತಿದ್ದು, ಬೇರೆ ಯೋಜನೆಗಳಿಗೆ ಇದರ ಹಣ ಬಳಸಿಕೊಳ್ಳುವ ಹುನ್ನಾರವೂ ಅಡಗಿದೆ. ಇದನ್ನು ವಿರೋಧಿಸಿ ಪ್ರತಿಭಟಿಸಲು ಕೆಆರ್‌ಎಸ್ ಸಿದ್ಧವಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಜನರ ತೆರಿಗೆ ಹಣ ಬಳಸಿಕೊಳ್ಳಲಿ. ಅದನ್ನು ಬಿಟ್ಟು ಬಳ್ಳಾರಿ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಗಣಿಬಾಧಿತ ಪ್ರದೇಶಗಳಿಗೆ ಮೀಸಲಿರುವ ಹಣ ದುರುಪಯೋಗ ಮಾಡಿಕೊಳ್ಳಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಆದೇಶ ಮೀರಿದರೆ, ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎನ್.ಟಿ.ನಾಗರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ಸಿ ನಗರಂಗೆರೆ, ಕಾರ್ಯದರ್ಶಿ ಬಾಲರಾಜ ಎಸ್ ಯಾದವ್, ಪದಾಧಿಕಾರಿಗಳಾದ ಪೃಥ್ವಿ, ಓಂಕಾರಪ್ಪ, ಲುಂಕೇಶ್, ತಿಪ್ಪೀರಪ್ಪ ಇತರರಿದ್ದರು.